ಕೋವಿಶೀಲ್ಡ್ ಪಡೆದ ಭಾರತೀಯರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಸ್ವಿಟ್ಜರ್ಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಏಳು ದೇಶಗಳು ಗುರುವಾರ ಕೋವಿಶೀಲ್ಡ್ ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿವೆ.
ಒಂದು ದಿನ ಮುಂಚಿತವಾಗಿ ಭಾರತ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಅನ್ನು ಪಾಸ್ಪೋರ್ಟ್ ಪಟ್ಟಿಯಲ್ಲಿ ಸೇರಿಸುವಂತೆ ಇಯು ಸದಸ್ಯರಿಗೆ ಮನವಿ ಮಾಡಿತ್ತು. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಪಾಸ್ಪೋರ್ಟ್ ಪಟ್ಟಿಗೆ ಸೇರಿಸದೆ ಹೋದಲ್ಲಿ ಇಯು ನಾಗರಿಕರಿಗೆ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಬೇಕಾಗುತ್ತದೆ ಎಂದು ಭಾರತ ಸರ್ಕಾರ ಹೇಳಿತ್ತು.
ಗುರುವಾರ, ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐರ್ಲೆಂಡ್ ಮತ್ತು ಸ್ಪೇನ್ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದೆ. ಕೋವಿನ್ ಪೋರ್ಟಲ್ ಮೂಲಕ ಪಡೆದ ಲಸಿಕೆ ಪ್ರಮಾಣಪತ್ರವನ್ನು ಅಂಗೀಕರಿಸುವಂತೆ ಭಾರತ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿತ್ತು. ಈ ಸಂದರ್ಭದಲ್ಲಿ, ಭಾರತೀಯ ಅಧಿಕಾರಿಗಳು, ಪ್ರಮಾಣಪತ್ರದ ಪ್ರಾಮಾಣಿಕತೆಯನ್ನು ಕೋವಿನ್ ಮೂಲಕ ಪ್ರಮಾಣೀಕರಿಸಬಹುದು ಎಂದಿದ್ದರು.
ಪ್ರಸ್ತುತ ನಿಯಮಗಳ ಪ್ರಕಾರ, ಕೋವಿಶೀಲ್ಡ್ ಅಥವಾ ಕೊವಾಕ್ಸಿನ್ ಪಡೆದ ಭಾರತೀಯರು ಮತ್ತು ಇತರ ದೇಶಗಳ ಜನರು ಇಯುನಲ್ಲಿ ಅರಾಮವಾಗಿ ಓಡಾಡಲು ಸಾಧ್ಯವಿಲ್ಲ. ಪ್ರತಿ ದೇಶವು ಮಾಡಿದ ನಿಯಮಗಳ ಜೊತೆಗೆ ಕ್ವಾರಂಟೈನ್ ನಿಯಮ ಪಾಲಿಸಬೇಕು.