ಸ್ಕೂಟರ್‌ನಲ್ಲಿ ಸೂಪರ್‌ಬೈಕ್‌ನ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಹುಡುಕುತ್ತಿದ್ದರೆ, ಸುಜುಕಿ ಬರ್ಗ್ಮನ್ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ. ಚಾಲನೆ ಸಮಯದಲ್ಲಿ ಸುಜುಕಿ ಬರ್ಗ್‌ಮನ್ ಸೂಪರ್ ಬೈಕ್‌ನ ಶಕ್ತಿಯ ಸಂಪೂರ್ಣ ಅನುಭವವನ್ನು ನೀಡುತ್ತದೆ. ಸುಜುಕಿ, ಈ ಸ್ಕೂಟರ್ ಗೆ ಬೈಕು ಮತ್ತು ಸ್ಕೂಟರ್ ಕಂಬೈನ್ ಲುಕ್ ನೀಡಿದೆ.
ಈ ಸ್ಕೂಟರ್‌ನಲ್ಲಿ ಸುಜುಕಿ ಡಿಜಿಟಲ್ ಸೌಲಭ್ಯ ನೀಡಿದೆ. ವೈಫೈ ಸಹಾಯದಿಂದ ಸ್ಮಾರ್ಟ್ ಫೋನ್‌ನೊಂದಿಗೆ ನೀವು ಸಂಪರ್ಕ ಸಾಧಿಸಬಹುದು. ಈ ಡಿಜಿಟಲ್ ಕನ್ಸೋಲ್‌ನಲ್ಲಿ, ಸ್ಕೂಟರ್‌ನ ವೇಗ, ಇಂಧನ ಟ್ಯಾಂಕ್ ವಿವರ, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಮಿಸ್ಡ್ ಕಾಲ್ ಅಲರ್ಟ್, ಎಸ್‌ಎಂಎಸ್ ಮತ್ತು ವಾಟ್ಸಾಪ್ ಅಲರ್ಟ್‌ನೊಂದಿಗೆ ನಿಮ್ಮ ಫೋನ್‌ನ ಬ್ಯಾಟರಿಯ ಚಾರ್ಜಿಂಗ್ ಮಟ್ಟವನ್ನು ನೀವು ತಿಳಿಯಬಹುದು.
ಈ ಸುಜುಕಿ ಸ್ಮಾರ್ಟ್ ಸ್ಕೂಟರನ್ನು ಸುಲಭವಾಗಿ ಚಲಾಯಿಸಬಹುದು. ಸುಜುಕಿ ಬರ್ಗ್ಮನ್ ಸ್ಕೂಟರ್ ನಲ್ಲಿ ಐಷಾರಾಮಿ ಎಲ್ಇಡಿ ಹೆಡ್ಲೈಟ್ ಇದೆ. ಸವಾರನ ಅನುಕೂಲಕ್ಕಾಗಿ ಸ್ಕೂಟರ್‌ನಲ್ಲಿ ಕಾಲಿಡಲು ಸಾಕಷ್ಟು ಜಾಗವನ್ನು ನೀಡಿದೆ. ಇದು ಡ್ರೈವ್ ಸಮಯದಲ್ಲಿ ಸವಾರನಿಗೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ.
ಈ ಸ್ಕೂಟರ್‌ನಲ್ಲಿ ಬಿಎಸ್ 6 ಕಂಪೈಲ್ ಆಧಾರಿತ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಇದೆ. ಸುಜುಕಿ ಬರ್ಗ್‌ಮನ್ ಸ್ಕೂಟರ್‌ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆಯುತ್ತೀರಿ.
ಸುಜುಕಿ ಬರ್ಗ್ಮನ್ ಸ್ಕೂಟರ್ 5 ಬಣ್ಣಗಳಲ್ಲಿ ಲಭ್ಯವಿದೆ. ದೆಹಲಿ ಎಕ್ಸ್ ಶೋರೂಂನಲ್ಲಿ ಇದ್ರ ಬೆಲೆ 86,200 ರೂಪಾಯಿ.