ಮಂಗಳೂರು: ಡಿಸೆಂಬರ್ 1 ರಿಂದ ಮಂಗಳೂರು ಸುರತ್ಕಲ್ ಟೋಲ್ ಗೇಟ್ ಸ್ಥಗಿತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ಸುರತ್ಕಲ್ ಟೋಲ್ ರದ್ದುಗೊಳಿಸಲಾಗಿದ್ದು, ಸುರತ್ಕಲ್ ಟೋಲ್ ಹೆಚ್ಚುವರಿ ಶುಲ್ಕವನ್ನು ಉಡುಪಿಯ ಹೆಜಮಾಡಿಯಲ್ಲಿ ಸಂಗ್ರಹಿಸಲಾಗುತ್ತದೆ.
ಹೆಜಮಾಡಿ ಟೋಲ್ ಗೇಟ್ ದರ ಪರಿಷ್ಕರಿಸಿ ಸುತ್ತೋಲೆ ಹೊರಡಿಸಲಾಗಿದೆ.
ಕಾರುಗಳಿಗೆ ಏಕಮುಖ ಪಾಸಿಂಗ್ 40 ರೂ.ನಿಂದ 100 ಶುಲ್ಕ ಪಾವತಿಸಬೇಕಿದೆ.
ಲಘು ವಾಣಿಜ್ಯ ಸರಕು ವಾಹನಗಳಿಗೆ 70 ರೂ ನಿಂದ 170 ರೂ. ಆಗಲಿದೆ
ಬಸ್ ಮತ್ತು ಟ್ರಕ್ ಗಳಿಗೆ ಏಕಮುಖ ಪಾಸಿಂಗ್ ದರ 210 ರೂ ನಿಂದ 350 ರೂ. ಶುಲ್ಕ ಪಾವತಿಸಬೇಕಿದೆ.
ಭಾರಿ ಗಾತ್ರದ ಮಲ್ಟಿ ಆಕ್ಸೆಲ್ ವಾಹನಗಳಿಗೆ 225 ರೂ ನಿಂದ 555 ರೂ. ಆಗಲಿದೆ ಎಂದು ಹೇಳಲಾಗಿದೆ. ಹೀಗೆ ಟೋಲ್ ಭಾರಿ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.