ಚಾಂಡಿ ಪಾಡ್ವೋ ಉತ್ಸವದ ವಿಶೇಷವಾಗಿ ಸೂರತ್ನ ಸಿಹಿ ತಿಂಡಿಗಳ ಮಳಿಗೆಯೊಂದು ತನ್ನ ಮೆನು ಲಿಸ್ಟ್ಗೆ ಗೋಲ್ಡ್ ಸ್ವೀಟ್ ಹೆಸರಿನ ಹೊಸ ತಿನಿಸನ್ನ ಸೇರಿಸಿದೆ. ಈ ಹೊಸ ತಿಂಡಿಯ ಫೋಟೋಗಳು ಟ್ವಿಟರ್ನಲ್ಲಿ ಫುಲ್ ವೈರಲ್ ಆಗಿದೆ.
ಸ್ವೀಟ್ ಘರಿ ಎಂಬ ತಿಂಡಿಯಲ್ಲೇ ಕೆಲ ಬದಲಾವಣೆಗಳನ್ನ ಮಾಡಿ ಅದಕ್ಕೆ ಗೋಲ್ಡ್ ಘರಿ ಅಂತಾ ಹೆಸರಿಡಲಾಗಿದೆ. ಅಂದಹಾಗೆ ಈ ಹೊಸ ತಿನಿಸಿನ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 9 ಸಾವಿರ ರೂಪಾಯಿಯಂತೆ. ಆದರೆ ಸ್ವೀಟ್ ಘರಿ ಈಗಲೂ ಪ್ರತಿ ಕೆಜಿಗೆ 660-820 ರೂಪಾಯಿಗೆ ಲಭ್ಯವಿದೆ ಅಂತಾ ಅಂಗಡಿ ಮಾಲೀಕ ರೋಹನ್ ಹೇಳಿದ್ದಾರೆ .
ಆರ್ಯುವೇದದಲ್ಲೂ ಚಿನ್ನವನ್ನ ಅತ್ಯುತ್ತಮ ಲೋಹಗಳ ಸಾಲಿಗೆ ಸೇರಿಸಲಾಗಿದೆ. ಹೀಗಾಗಿ ಈ ಗೋಲ್ಡ್ ಘರಿ ತಿಂಡಿ ನಿಮ್ಮ ಆರೋಗ್ಯಕ್ಕೆ ತುಂಬಾನೇ ಉಪಕಾರಿ. ಆದರೆ ಈ ಹೊಸ ತಿನಿಸು ನಾವು ಅಂದುಕೊಂಡ ಮಟ್ಟದಲ್ಲಿ ಸದ್ಯಕ್ಕೆ ಮಾರಾಟವಾಗ್ತಿಲ್ಲ. ಮುಂದಿನ ದಿನಗಳಲ್ಲಿ ಗೋಲ್ಡ್ ಘರಿಗೆ ಆಹಾರ ಪ್ರಿಯರು ಫಿದಾ ಆಗಬಹುದು ಅಂತಾ ರೋಹನ್ ವಿಶ್ವಾಸ ವ್ಯಕ್ತಪಡಿಸಿದ್ರು.