ನವದೆಹಲಿ: ಬ್ಯಾಂಕ್ ಸಾಲದ ಮೇಲಿನ ಬಡ್ಡಿಗೆ ಚಕ್ರಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮೊರಾಟೋರಿಯಂ(ಸಾಲದ ಕಂತು ಮುಂದೂಡಿಕೆ) ವಿಸ್ತರಣೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
ಸಾಲಗಳನ್ನು ಅನುತ್ಪಾದಕ ಸಾಲ ಎಂದು ಘೋಷಿಸಬಾರದು ಎಂದು ಸೂಚಿಸಲಾಗಿದೆ. ಆಗಸ್ಟ್ 31 ಕ್ಕೆ ಸಾಲ ಮರುಪಾವತಿ ಮಾಡದ ಸಾಲವನ್ನು ಈ ವಿಚಾರಣೆ ಇತ್ಯರ್ಥವಾಗುವವರೆಗೆ ಅನುತ್ಪಾದಕ ಸಾಲವೆಂದು ಘೋಷಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಮೊರಾಟೋರಿಯಂ ವಿಸ್ತರಣೆ, ಚಕ್ರ ಬಡ್ಡಿ ಮನ್ನಾ ಕೋರಿದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದ್ದು, ಸೆಪ್ಟಂಬರ್ 10 ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ.