alex Certify GOOD NEWS: ಆಧಾರ್ ಇಲ್ಲವೆಂದ್ರೂ ಎಲ್.ಪಿ.ಜಿ. ಮೇಲೆ ಸಿಗಲಿದೆ ಸಬ್ಸಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಆಧಾರ್ ಇಲ್ಲವೆಂದ್ರೂ ಎಲ್.ಪಿ.ಜಿ. ಮೇಲೆ ಸಿಗಲಿದೆ ಸಬ್ಸಿಡಿ

ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಯ್ದಿರಿಸುವಾಗ ಸರ್ಕಾರ ನೇರವಾಗಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಕಳುಹಿಸುತ್ತದೆ. ಸಿಲಿಂಡರ್ ಸಂಪರ್ಕದೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯ.

ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಥವಾ ಎಲ್ಪಿಜಿ ಸಂಪರ್ಕದೊಂದಿಗೆ ಲಿಂಕ್ ಮಾಡಲು ಸಾಧ್ಯವಾಗದಿದ್ದರೂ ನೀವು ಗ್ಯಾಸ್ ಸಬ್ಸಿಡಿ ಪಡೆಯಬಹುದು. ಅದಕ್ಕಾಗಿ ಈ ಕೆಲಸಗಳನ್ನು ಮಾಡಬೇಕಾಗುತ್ತದೆ.

ಗ್ಯಾಸ್ ಸಬ್ಸಿಡಿ ಪಡೆಯಲು, ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಎಲ್ಪಿಜಿ ವಿತರಕರಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ಖಾತೆದಾರರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಕೋಡ್ ಮತ್ತು 17 ಅಂಕಿಯ ಎಲ್‌ಪಿಜಿ ಗ್ರಾಹಕ ಐಡಿಯನ್ನು ನೀಡಬೇಕಾಗುತ್ತದೆ. ಅದರ ನಂತರ ಗ್ರಾಹಕರ ಸಬ್ಸಿಡಿ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕೈನಲ್ಲಿ ಆಧಾರ್ ಕಾರ್ಡ್ ಇದ್ದು, ಇನ್ನೂ ಸಿಲಿಂಡರ್ ಸಂಪರ್ಕದ ಜೊತೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಈಗ್ಲೇ ಆನ್‌ಲೈನ್‌ನಲ್ಲಿ ಲಿಂಕ್ ಮಾಡಬಹುದು. ಗ್ರಾಹಕರ ಸಹಾಯವಾಣಿಗೆ ಕರೆ ಮಾಡುವ ಮೂಲಕ ಕೂಡ ಲಿಂಕ್ ಮಾಡಬಹುದು.‌ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800 2333 555 ಗೆ ಕರೆ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...