ನವದೆಹಲಿ: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 17 ರೂಪಾಯಿ ಏರಿಕೆ ಮಾಡಲಾಗಿದ್ದು, ಹೊಸ ವರ್ಷದ ಮೊದಲ ದಿನವೇ ಶಾಕ್ ನೀಡಲಾಗಿದೆ. ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ದರಗಳಲ್ಲಿ ಬದಲಾವಣೆ ಆಗಿಲ್ಲ.
ವಾಣಿಜ್ಯ ಉದ್ದೇಶದ 19 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 17 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರ 1332 ರೂಪಾಯಿಂದ 1349 ರೂಪಾಯಿಗೆ ಹೆಚ್ಚಾಗಿದೆ.
ಕಳೆದ ತಿಂಗಳು ತೈಲಕಂಪನಿಗಳು ಎರಡು ಸಲ ತಲಾ 50 ರೂಪಾಯಿಯಂತೆ ಸಿಲಿಂಡರ್ ದರ ಏರಿಕೆ ಮಾಡಿವೆ. ಡಿಸೆಂಬರ್ ನಲ್ಲಿ ಸಿಲಿಂಡರ್ ಗೆ 100 ರೂಪಾಯಿ ಹೆಚ್ಚಾಗಿ 694 ರೂಪಾಯಿಗೆ ತಲುಪಿದೆ. ಇನ್ನು ಕಳೆದ ಮೇ ತಿಂಗಳಿಂದಲೂ ಗ್ರಾಹಕರಿಗೆ ಸಬ್ಸಿಡಿ ಬಂದಿಲ್ಲ.