ಬೆಂಗಳೂರು :2024-25 ನೇ ಸಾಲಿಗೆ ವರ್ಷಾಂತ್ಯದಲ್ಲಿ ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸಲು ಉಲ್ಲೇಖಿತ ಸರ್ಕಾರಿ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು. ಪ್ರಸ್ತುತ, ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಿ ಆದೇಶಿಸಲಾಗಿದೆ.
2024-25 ನೇ ಸಾಲಿಗೆ ಸಂಬಂಧಿಸಿದಂತೆ ಎಲ್ಲಾ ಬಿಲ್ಲುಗಳನ್ನು (ಅನುದಾನ ಲಭ್ಯವಿದ್ದಲ್ಲಿ ವೇತನ ಬಾಕಿ ಬಿಲ್ಲುಗಳು ಸೇರಿದಂತೆ) ದಿ:29.3.2025 ಹಾಗೂ 30.03.2025 ರಂದು 5.30 ರವರೆಗೆ ಖಜಾನೆಯಲ್ಲಿ ಸ್ವೀಕರಿಸುವಂತೆ ಆದೇಶಿಸಲಾಗಿದೆ. ಮೇಲಿನಂತೆ ನಿಗದಿತ ಸಮಯದೊಳಗೆ ಆನ್ ಲೈನಲ್ಲಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಿದ ನಂತರ ತತ್ಸಂಬಂಧ ಭೌತಿಕ ಪ್ರತಿಗಳನ್ನೂ ಸಹಾ ತಪ್ಪದೇ 5.30 ಯೊಳಗೆ ಖಜಾನೆಗೆ ಸಲ್ಲಿಸುವುದು ಡಿ.ಡಿ.ಓ ರವರ ಜವಾಬ್ದಾರಿಯಾಗಿರುತ್ತದೆ. ಖಜಾನೆಯು ದಿ:29.3.2025 ರಂದು ಹಾಗೂ ದಿ: 30.3.2025 ರಂದು ಸಂಜೆ 5.30 ರವರೆಗೆ ತೆರೆದಿರತಕ್ಕದ್ದೆಂದು ಆದೇಶಿಸಿದೆ.
