ಸ್ಟಡ್ಸ್ ಅನ್ನೋದು ವಿಶ್ವದಲ್ಲೇ ಅತ್ಯಂತ ದೊಡ್ಡ ಹೆಲ್ಮೆಟ್ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಇತ್ತೀಚೆಗೆ ಅರ್ಬನ್ ಸೂಪರ್ ಡಿ 1 ಡೆಕೊರ್ ಹೆಲ್ಮೆಟ್ನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ಬೆಲೆ 1220 ರೂಪಾಯಿ ಆಗಿದೆ. ಇದು ಅರ್ಧ ಮುಖವನ್ನ ಕವರ್ ಮಾಡಬಲ್ಲ ಹೆಲ್ಮೆಟ್ ಆಗಿದ್ದು ಸೂರ್ಯನ ಕಿರಣಗಳನ್ನ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಅಲ್ಲದೇ ಈ ಹೆಲ್ಮೆಟ್ ಎಲ್ಲಾ ಮಾದರಿಯ ದ್ವಿಚಕ್ರವಾಹನ ಸವಾರರಿಗೆ ಅನುಕೂಲವಾಗುವ ರೀತಿಯಲ್ಲೇ ವಿನ್ಯಾಸಗೊಂಡಿದೆ ಎಂದು ಸ್ಟಡ್ಸ್ ಹೇಳಿದೆ. ಈ ಹೆಲ್ಮೆಟ್ 5 ವಿಧದ ಗಾತ್ರದಲ್ಲಿ ಲಭ್ಯವಿದೆ. ಸಣ್ಣ (540mm), ಮಧ್ಯಮ (570mm), ದೊಡ್ಡ (580mm), ಇನ್ನೂ ದೊಡ್ಡ (600mm) ಗಾತ್ರಗಳು ಲಭ್ಯ ಇದೆ. ಅಲ್ಲದೇ ಈ ಹೆಲ್ಮೆಟ್ ಗ್ಲಾಸಿ ಹಾಗೂ ಮ್ಯಾಟ್ ಎರಡೂ ವಿಧಗಳಲ್ಲೂ ಲಭ್ಯವಿದೆ.
ಹೆಲ್ಮೆಟ್ನ ಒಳಭಾಗದಲ್ಲಿ ಅತ್ಯುನ್ನತ ಗುಣಮಟ್ಟದ ಬಟ್ಟೆಯನ್ನ ಬಳಸಲಾಗಿದ್ದು, ಬೈಕ್ ಸವಾರರು ಹೆಚ್ಚಿನ ಅವಧಿ ಹೆಲ್ಮೆಟ್ ಧರಿಸಿಯೇ ಇರಬಹುದಾಗಿದೆ. ಅಲ್ಲದೇ ಈ ಬಟ್ಟೆಯಿಂದ ಯಾವುದೇ ಅಲರ್ಜಿ ಸಮಸ್ಯೆ ಉಂಟಾಗೋದಿಲ್ಲ ಎಂದೂ ಕಂಪನಿ ಹೇಳಿದೆ.