ಕತ್ತಲೆಯಲ್ಲಿ ಸ್ಪಷ್ಟವಾಗಿ ನೋಡಲು ಅನುವಾಗುವಂತೆ, ಬೇಕಾದ ಬಣ್ಣದಲ್ಲಿ ಜಗತ್ತನ್ನು ನೋಡುವಂತೆ ಹಾಗೂ ಸ್ಮರಣೀಯ ಕ್ಷಣಗಳನ್ನು ರೆಕಾರ್ಡ್ ಮಾಡುವಂಥ ಸ್ಮಾರ್ಟ್ ಕಾಂಟಾಕ್ಟ್ ಲೆನ್ಸ್ ಧರಿಸುವುದನ್ನು ಎಂದಾದರೂ ಊಹಿಸಿಕೊಂಡಿದ್ದಿರಾ…?
ಈ ಕಾನ್ಸೆಪ್ಟ್ ಅನ್ನು ಲೆನ್ಸ್ ಕಾರ್ಟ್ ಇ-ಶಾಪ್ ಹೊರತಂದಿದ್ದು, 2021ರಲ್ಲಿ ವಾಸ್ತವಿಕವಾಗಿ ಮೂಡಿಬರಲಿದೆ. ಐ ಲೆನ್ಸ್ ಎಂದು ಕರೆಯಲಾಗುವ ಈ ಅವಿಷ್ಕಾರದ ಮೂಲಕ ಬ್ಲೂಟೂತ್ ಮುಖಾಂತರ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ನಿಮ್ಮ ನೇತ್ರ ದೃಷ್ಟಿಯನ್ನು ಇನ್ನಷ್ಟು ಸುಧಾರಿಸಲು ಟೆಲಿಫೋಟೋ ಕ್ಯಾಮರದ 60x ನಷ್ಟು ಜೂಮ್ ಸಹ ಮಾಡಬಹುದಾಗಿದೆ. ಕತ್ತಲೆಯಲ್ಲೂ ಸಹ ಸ್ಪಷ್ಟವಾಗಿ ನೋಡಲು ಈ ತಾಂತ್ರಿಕ ಆವಿಷ್ಕಾರ ನಿಮಗೆ ನೆರವಾಗಲಿದೆ.
ಸಾರ್ವಜನಿಕ ಪ್ರದೇಶದಲ್ಲಿದ್ದರೆ ಬೇರೆ ಜನರಿಂದ ಅಂತರ ಕಾಯ್ದುಕೊಳ್ಳಲು ನಿಮಗೆ ಸೂಚನೆಗಳನ್ನು ಕೊಡುವಂಥ ಅನೇಕ ಸ್ಮಾರ್ಟ್ ಕೆಲಸಗಳನ್ನು ಈ ಲೆನ್ಸ್ ಮಾಡುತ್ತದೆ. ಜೊತೆಗೆ ಹೆಚ್ಚು ಬೆಳಕು ಹಾಗೂ ಕತ್ತಲೆಯಲ್ಲಿ ಒಂದೇ ಸಮ ನೋಡುತ್ತಲೇ ಇದ್ದಾಗ, ಪುಟ್ಟದೊಂದು ಬ್ರೇಕ್ ತೆಗೆದುಕೊಳ್ಳಲೂ ಸಹ ಲೆನ್ಸ್ ನಿಮಗೆ ಸೂಚಿಸುತ್ತದೆ.
ಸಿಲಿಕೋನ್ ಹೈಡ್ರೋಜೆಲ್ ಬಳಸಿ ವಿನ್ಯಾಸಗೊಳಿಸಲಾದ ಈ ಲೆನ್ಸ್ ಅನ್ನು QI ಚಾರ್ಜಿಂಗ್ ಸ್ಟೇಷನ್ ಜೊತೆಗೆ ಶಿಪ್ಪಿಂಗ್ ಮಾಡಲಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 48 ಗಂಟೆಗಳ ಕಾಲ ಈ ಲೆನ್ಸ್ ಕೆಲಸ ಮಾಡುತ್ತದೆ. ಯಾರು ಬೇಕಾದರೂ ಈ ಲೆನ್ಸ್ ಅನ್ನು ಬಳಸಬಹುದಾಗಿದೆ.