ವಸತಿ ಉದ್ದೇಶದ ಜಾಗ ಬ್ಯುಸಿನೆಸ್ ಕಂಪನಿಗಳಿಗೆ ಬಾಡಿಗೆಗೆ ನೀಡಿದಾಗ ಜಿ.ಎಸ್.ಟಿ. ಪಾವತಿಸಬೇಕು. ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ನೀಡಿದಾಗ ಜಿ.ಎಸ್.ಟಿ. ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಖಾಸಗಿ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡಿದಾಗ ಜಿ.ಎಸ್.ಟಿ. ಕೊಡಬೇಕಿಲ್ಲ. ಕಂಪನಿಯ ಮುಖ್ಯಸ್ಥ, ಪಾಲುದಾರ ಹಾಗೂ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ಪಡೆದಾಗ ಯಾವುದೇ ಜಿ.ಎಸ್.ಟಿ. ಪಾವತಿಸಬೇಕಿಲ್ಲ. ಜಿ.ಎಸ್.ಟಿ. ನೋಂದಾಯಿತ ಉದ್ಯಮಿಗಳಿಗೆ ಮನೆ ಬಾಡಿಗೆ ಮೇಲೆ ಶೇಕಡ 18 ರಷ್ಟು ಜಿ.ಎಸ್.ಟಿ. ವಿಧಿಸಿದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಯಾವುದೇ ವಸತಿ ಪ್ರಾಪರ್ಟಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರೆ ನೀವು ಬಾಡಿಗೆಗೆ ಹೆಚ್ಚುವರಿಯಾಗಿ 18% ಜಿಎಸ್‌ಟಿಯನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಕಳೆದ ಕೆಲವು ದಿನಗಳಿಂದ ವದಂತಿ ಹರಡಿದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ.
ವಸತಿ ಘಟಕವನ್ನು ವ್ಯಾಪಾರ ನಡೆಸಲು ಜಿಎಸ್‌ಟಿ ನೋಂದಾಯಿತ ಕಂಪನಿಗೆ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಅದನ್ನು ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ತೆಗೆದುಕೊಂಡರೆ, ಅದರ ಮೇಲೆ ಯಾವುದೇ GST ಪಾವತಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.