ಕೊರೊನಾ ವೈರಸ್ ಲಸಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ಲಭ್ಯ ಎನ್ನಲಾಗ್ತಿತ್ತು. ಆದ್ರೆ ಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಆಕ್ಸ್ ಫರ್ಡ್ ಕೋವಿಡ್ 19 ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಲಸಿಕೆ ಪ್ರಯೋಗದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಆತನ ಅನಾರೋಗ್ಯಕ್ಕೆ ಕಾರಣವೇನು ಎಂಬುದು ಪತ್ತೆಯಾಗ್ತಿಲ್ಲ. ತಾತ್ಕಾಲಿಕವಾಗಿ ಪರೀಕ್ಷೆ ನಿಲ್ಲಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಸುದ್ದಿಯಿಂದಾಗಿ ಅಮೆರಿಕಾ ಮತ್ತು ಯುರೋಪಿಯನ್ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡಿವೆ. ಇದು ದೇಶಿ ಮಾರುಕಟ್ಟೆ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳಿದ್ದಾರೆ. ಯುಎಸ್ ಷೇರು ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ, ಜಪಾನ್‌ನಲ್ಲೂ ಇಳಿಕೆ ಕಂಡು ಬಂದಿದೆ. ಅಲ್ಲಿನ ನಿಕ್ಕಿ ಶೇಕಡಾ 1.50 ರಷ್ಟು ಕುಸಿದು 22922ಕ್ಕೆ ತಲುಪಿದೆ. ಚೀನಾದ ಶಾಂಘೈ ಶೇಕಡಾ 1.30 ರಷ್ಟು ಕುಸಿದು 3273 ಮಟ್ಟಕ್ಕೆ ತಲುಪಿದೆ.