
ಕೇಂದ್ರ ಸರ್ಕಾರ, ಟಿಕ್ ಟಾಕ್, ವಿ ಚಾಟ್ ಸೇರಿದಂತೆ ಚೀನಾದ 59 ಆಪ್ ಗಳ ಮೇಲೆ ನಿಷೇಧ ಹೇರಿರುವ ಕ್ರಮವನ್ನು ದೇಶವಾಸಿಗಳು ಸ್ವಾಗತಿಸಿದ್ದರು. ಅಲ್ಲದೇ ಇದಕ್ಕೂ ಮುನ್ನವೇ ಚೀನಾ ಉತ್ಪನ್ನ ಕೊಂಡುಕೊಳ್ಳುವುದಿಲ್ಲವೆಂದು ಹೇಳುವ ಮೂಲಕ ದೇಶ ಪ್ರೇಮ ಮೆರೆದಿದ್ದರು. ಇದೀಗ ದೇಶದ ಪ್ರಮುಖ ಹಾಲು ಉತ್ಪನ್ನ ತಯಾರಿಕಾ ಸಂಸ್ಥೆ ಅಮೂಲ್ ಕೂಡಾ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದೆ.
ಈ ಹಿಂದೆಯೂ ಪ್ರಮುಖ ಸಂದರ್ಭಗಳಲ್ಲಿ ತನ್ನ ಉತ್ಪನ್ನದ ಚಿತ್ರಗಳ ಮೂಲಕವೇ ಸಂದೇಶ ರವಾನಿಸುತ್ತಿದ್ದ ಅಮೂಲ್ ಈಗ sTik-with-this-sTok ಜೊತೆಗೆ wechat ಎಂಬ ಡೂಡಲ್ ಕ್ರಿಯೇಟ್ ಮೂಲಕ ಪರೋಕ್ಷವಾಗಿ ಚೀನಾ ಆಪ್ ಗಳಿಗೆ ಟಾಂಗ್ ನೀಡಿದೆ. ಜೊತೆಗೆ New Delhi bans 59 Chinese apps ಎಂಬ ಬರಹವನ್ನೂ ನೀಡಿದೆ. ಅಮೂಲ್ ನ ಈ ಡೂಡಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕ್ರಿಯಾಶೀಲತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.