ಉಕ್ಕಿನ ಬೆಲೆ ಕಳೆದ ಆರು ತಿಂಗಳಲ್ಲಿ ಟನ್ ಗೆ ಶೇ. 40 ರಷ್ಟು 57,000 ರೂ.ಗೆ ಕುಸಿದಿದೆ. 2022 ರ ಆರಂಭದಲ್ಲಿ, ಹಾಟ್ ರೋಲ್ಡ್ ಕಾಯಿಲ್(HRC) ಬೆಲೆಗಳು ಏರುಮುಖ ಪ್ರವೃತ್ತಿ ತೋರಿಸಲಾರಂಭಿಸಿದ್ದವು.
ಉಕ್ಕಿನ ಬೆಲೆಗಳಲ್ಲಿನ ಏರಿಳಿತ ರಿಯಲ್ ಎಸ್ಟೇಟ್ ಮತ್ತು ವಸತಿ, ಮೂಲಸೌಕರ್ಯ ಮತ್ತು ನಿರ್ಮಾಣ, ಆಟೋಮೊಬೈಲ್ ಮತ್ತು ಗ್ರಾಹಕ ಸರಕುಗಳಂತಹ ಉದ್ಯಮಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ಇದು ಬಳಕೆದಾರರ ಕೈಗಾರಿಕೆಗಳಿಗೆ ಕಳವಳದ ವಿಷಯವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಏಪ್ರಿಲ್‌ನಲ್ಲಿ ಪ್ರತಿ ಟನ್‌ಗೆ 78,800 ರೂ. ಇತ್ತು
18 ರಷ್ಟು ಜಿಎಸ್‌ಟಿ ವಿಧಿಸಿದ ನಂತರ ಪ್ರತಿ ಟನ್ ಗೆ ಸುಮಾರು 93,000 ರೂ. ಏರಿಕೆಯಾಗಿದ್ದು, ಏಪ್ರಿಲ್ ಅಂತ್ಯದಿಂದ ಬೆಲೆಗಳು ಕುಸಿಯಲಾರಂಭಿಸಿದವು. ಜೂನ್ ಅಂತ್ಯದ ವೇಳೆಗೆ ಪ್ರತಿ ಟನ್‌ಗೆ 60,200 ರೂ.ಗೆ ಇಳಿದಿದೆ. ಜುಲೈ ಮತ್ತು ಆಗಸ್ಟ್ ನಲ್ಲಿ ಕುಸಿತ ಮುಂದುವರೆದು ಸೆಪ್ಟೆಂಬರ್ ಮಧ್ಯದ ವೇಳೆಗೆ ಪ್ರತಿ ಟನ್‌ಗೆ 57,000 ರೂ.ಗೆ ಇಳಿದಿದೆ.