ನವದೆಹಲಿ: ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರವು ಕುರಿತು ಮೇಲಿನ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ ಉಕ್ಕಿನ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಕಳೆದ ಎರಡು ವಾರದಲ್ಲಿ ಮಾರುಕಟ್ಟೆಯಲ್ಲಿ ಉಕ್ಕಿನ ದರ ಶೇಕಡ 10 ರಷ್ಟು ಕಡಿಮೆಯಾಗಿದೆ. ಎರಡು ತಿಂಗಳ ಅವಧಿಯಲ್ಲಿ ಪ್ರತಿ ಟನ್ ಉಕ್ಕಿನ ಬೆಲೆ 15,000 ರೂ. ಕುಸಿತ ಕಂಡಿದೆ.
ಮೇ 18 ರಿಂದ ಇದುವರೆಗೆ ಶೇಕಡ 8 ರಷ್ಟು ಟನ್ ಗೆ 5500 ರೂ. ಕಡಿಮೆಯಾಗಿ ಪ್ರತಿಟನ್ ಉಕ್ಕಿನ ಬೆಲೆ 63,800 ರೂ.ಗೆ ಇಳಿದಿದೆ. ಏಪ್ರಿಲ್ ಮೊದಲ ವಾರ 78,800 ರೂ. ದರ ಇತ್ತು. ಕೇಂದ್ರ ಸರ್ಕಾರ ಮೇ 22 ರಿಂದ ಜಾರಿಗೆ ಬರುವಂತೆ ಉಕ್ಕಿನ ಮೇಲೆ ಶೇಕಡ 15ರಷ್ಟು ರಫ್ತು ಸುಂಕ ವಿಧಿಸಿದೆ. ಹಣದುಬ್ಬರ ತಡೆಗೆ ಈ ಕ್ರಮ ಕೈಗೊಳ್ಳಲಾಗಿದ್ದು ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಉಕ್ಕಿನ ದರ 15 ಸಾವಿರ ರೂಪಾಯಿವರೆಗೂ ಕಡಿಮೆಯಾಗಿದೆ.