ನವದೆಹಲಿಯಲ್ಲಿ ಜಿಎಸ್ಟಿ ಮಂಡಳಿ ಸಭೆ ಮುಕ್ತಾಯವಾಗಿದ್ದು, ಸಭೆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕೊರೊನಾ ಸಂಕಷ್ಟದಿಂದ ಜಿಎಸ್ಟಿ ಸಂಗ್ರಹ ಕುಸಿತವಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನೀಡಲು ಎರಡು ಆಯ್ಕೆಗಳನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸಾಲ ಕೊಡಿಸುವುದು, ಕಡಿಮೆ ಸಾಲ ಪಡೆದರೆ ನಂತರ ಸೆಸ್ ಪಡೆಯಬಹುದಾಗಿದೆ. ಹೆಚ್ಚು ಸಾಲ ಪಡೆದರೆ ಸೆಸ್ ಮೂಲಕ ಮರು ಪಾವತಿಸಬೇಕಿದೆ. ಈ ಬಗ್ಗೆ ಆಲೋಚಿಸಿ ತೀರ್ಮಾನಿಸಲು 7 ದಿನ ಕಾಲಾವಕಾಶ ನೀಡಲಾಗಿದೆ.
ಸರ್ಕಾರಗಳು 7 ದಿನ ಕಾಲಾವಕಾಶ ಪಡೆದಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದು, ಇದಾದ ಬಳಿಕ ಮತ್ತೊಂದು ಸುತ್ತಿನ ಜಿಎಸ್ಟಿ ಮಂಡಳಿ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಸೆಸ್ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಿದಲ್ಲಿ ಜನರ ಮೇಲೆ ಮತ್ತಷ್ಟು ತೆರಿಗೆ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.