ಎಸ್.ಬಿ.ಐ. ಹಿರಿಯ ನಾಗರಿಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಹಿರಿಯ ನಾಗರಿಕರಿಗೆ ವಿಶೇಷ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಅಂತಿಮ ದಿನಾಂಕವನ್ನು ಮುಂದೂಡಿದೆ. ಮೇ ತಿಂಗಳಿನಲ್ಲಿ ಎಸ್.ಬಿ.ಐ. ವಿ ಕೇರ್ ಹೆಸರಿನಲ್ಲಿ ವಿಶೇಷ ಸ್ಥಿರ ಠೇವಣಿ ಯೋಜನೆಯನ್ನು ಘೋಷಿಸಿತ್ತು.
ಪ್ರಸ್ತುತ, ಕುಸಿಯುತ್ತಿರುವ ಬಡ್ಡಿದರಗಳನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ಒದಗಿಸಲು ಈ ಯೋಜನೆಯನ್ನು ಬ್ಯಾಂಕ್ ಜಾರಿಗೆ ತಂದಿತ್ತು. ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆ ವರ್ಷದ ಅಂತ್ಯದ ವೇಳೆಗೆ ಲಭ್ಯವಿರುತ್ತದೆ. ಈ ಮೊದಲು ಸೆಪ್ಟೆಂಬರ್ 30 ರವರೆಗೆ ಈ ಯೋಜನೆ ಮಾನ್ಯವಾಗಿರುತ್ತದೆ ಎಂದು ಬ್ಯಾಂಕ್ ಘೋಷಿಸಿತ್ತು.
ಎಸ್.ಬಿ.ಐ.ನ ಈ ಹೊಸ ಯೋಜನೆಯಲ್ಲಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ 30 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಪ್ರೀಮಿಯಂ ಬಡ್ಡಿಯನ್ನು ನೀಡಲಾಗುವುದು. ಈ ಯೋಜನೆ ಡಿಸೆಂಬರ್ 31 ರವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಯೋಜನೆಯಡಿ ಹೆಸರು ನೋಂದಾಯಿಸುವ ಗ್ರಾಹಕರಿಗೆ ಮಾತ್ರ ನಿಗದಿತ ಅವಧಿಯಲ್ಲಿ ಲಾಭ ಸಿಗಲಿದೆ.