
ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡ್ತಿದೆ. ಮನೆಯಲ್ಲೇ ಕುಳಿತು ಠೇವಣಿ ಇಡುವ ಹಾಗೂ ಠೇವಣಿ ಹಿಂಪಡೆಯುವ ಅವಕಾಶವನ್ನೂ ಎಸ್‌ಬಿಐ ನೀಡ್ತಿದೆ. ಗ್ರಾಹಕರು ಬ್ಯಾಂಕ್ ಗೆ ಹೋಗದೆ ಡೋರ್ ಸ್ಟೆಪ್ ಸೌಲಭ್ಯದ ಲಾಭ ಪಡೆಯಬಹುದು.
ಮನೆಯಲ್ಲೇ ಕುಳಿತು ಚೆಕ್ ವಿತ್ ಡ್ರಾ, ಡಿಮಾಂಡ್ ಡ್ರಾಪ್ಟ್, ಪೇ ಆರ್ಡರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಟ್ವೀಟರ್ ಮೂಲಕ ಬ್ಯಾಂಕ್ ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. ಡೋರ್ ಸ್ಟೆಪ್ ಸೌಲಭ್ಯ ಬಯಸುವ ಗ್ರಾಹಕರು ಈಗ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು.
ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಕಾಲ್ ಸೆಂಟರ್ ಮೂಲಕ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಕೆಲಸದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಟೋಲ್ ಫ್ರೀ ಸಂಖ್ಯೆ 1800111103 ಗೆ ಕರೆ ಮಾಡಬಹುದು. ಎಸ್‌ಬಿಐ ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಗ್ರಾಹಕರು https://bank.sbi/dsb ಗೆ ಭೇಟಿ ನೀಡಬಹುದು. ಈ ಡೋರ್ ಸ್ಟೆಪ್ ಸೌಲಭ್ಯದ ಮೂಲಕ ಗ್ರಾಹಕ ಕನಿಷ್ಠ 1000 ರೂಪಾಯಿ, ಗರಿಷ್ಠ 20 ಸಾವಿರ ರೂಪಾಯಿ ವಿತ್ ಡ್ರಾ ಮಾಡಬಹುದು.