ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಯಿಂದ ಹಣ ಕಟ್ ಆಗ್ತಿದೆ. ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಆದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದೆ. ಸೈಬರ್ ಕ್ರೈಂನಿಂದಾಗಿ ತಮ್ಮ ಹಣ ಕಟ್ ಆಗ್ತಿದೆ ಎಂದು ಗ್ರಾಹಕರು ಭಯಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡ್ತಿದ್ದವು. ಇದಕ್ಕೆ ಎಸ್ಬಿಐ ಉತ್ತರ ನೀಡಿದೆ.
ಬ್ಯಾಂಕುಗಳು,ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತವೆ. ಗ್ರಾಹಕರ ಖಾತ ನಿರ್ವಹಣೆ, ಡೆಬಿಟ್, ಎಟಿಎಂ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ನೀಡುವುದು ಸೇರಿದಂತೆ ಬ್ಯಾಂಕ್ ನೀಡುವ ಸೇವೆಗೆ ಶುಲ್ಕ ವಸೂಲಿ ಮಾಡುತ್ತದೆ. ಈ ಬಾರಿ ಸಕ್ರಿಯ ಎಟಿಎಂ ಕಾರ್ಡ್‌ಗೆ 147.50 ರೂಪಾಯಿ ವಸೂಲಿ ಮಾಡಲಾಗ್ತಿದೆ.
ಎಸ್‌ಬಿಐ ಗ್ರಾಹಕರಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಈ ಹಣವನ್ನು ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗಿದೆ ಎಂದಿದೆ. ಬ್ಯಾಂಕ್ ಪ್ರಕಾರ, 125 ಪ್ಲಸ್ ಜಿಎಸ್ಟಿಗಳನ್ನು ಈ ಮೊತ್ತದಲ್ಲಿ ಕಡಿತಗೊಳಿಸಲಾಗಿದೆ. ಇದುವರೆಗೆ ಸಕ್ರಿಯವಾಗಿರುವ ಪ್ರತಿ ಎಟಿಎಂ ಕಮ್ ಡೆಬಿಟ್ ಕಾರ್ಡ್‌ಗೆ ನಿರ್ವಹಣಾ ಶುಲ್ಕವಾಗಿ ವರ್ಷಕ್ಕೆ 147.50 ರೂಪಾಯಿ ವಿಧಿಸಲಾಗುತ್ತದೆ ಎಂದು ಎಸ್‌ಬಿಐ ಟ್ವಿಟರ್ ನಲ್ಲಿ ತಿಳಿಸಿದೆ. ಎಸ್‌ಬಿಐ ಖಾತೆದಾರರು ತಿಂಗಳಿಗೆ ಐದು ಬಾರಿ ಸ್ಟೇಟ್ ಬ್ಯಾಂಕ್ ಎಟಿಎಂಗಳಿಂದ ಹಣವನ್ನು ಹಿಂತೆಗೆದುಕೊಂಡರೆ ಅಥವಾ ವಹಿವಾಟು ನಡೆಸಿದರೆ ಯಾವುದೇ ಶುಲ್ಕವಿಲ್ಲ.