ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯುವ ವ್ಯವಹಾರವನ್ನು ಪ್ರತಿಯೊಬ್ಬರೂ ಹುಡುಕುತ್ತಾರೆ. ಅಂತವರಿಗೆ ಈ ಬ್ಯುಸಿನೆಸ್ ಬೆಸ್ಟ್. 70 ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ಕಾರಿನ ಮಾಲೀಕರಾಗುವ ಜೊತೆಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿವರೆಗೆ ಲಾಭ ಪಡೆಯಬಹುದು. ಈಗಾಗಲೇ ಎಲ್ಲ ಪರವಾನಿಗೆ ಪಡೆದಿರುವ ಕಾರು ನಿಮಗೆ 70 ಸಾವಿರ ರೂಪಾಯಿಗೆ ಸಿಗಲಿದೆ.
ಕ್ಯಾಬ್ ಸೇವೆಗೆ ಕಾರು ನೀಡುವ ಅನೇಕ ವಿತರಕರು ನಮ್ಮಲ್ಲಿದ್ದಾರೆ. ಆಲ್ಟೋ, ಸ್ವಿಪ್ಟ್, ಡಿಜೈರ್, ವ್ಯಾಗನ್ ಆರ್, ಹ್ಯುಂಡೈ ಕಾರುಗಳು 50 ರಿಂದ 70 ಸಾವಿರ ರೂಪಾಯಿಗೆ ನಿಮಗೆ ಲಭ್ಯವಿದೆ. ನೀವು ಈ ಕಾರುಗಳನ್ನು ಓಲಾ, ಉಬರ್ ಜೊತೆ ಸೇರಿಸಬಹುದು. ಕಾರು ಖರೀದಿಸಿದ ತಕ್ಷಣದಿಂದಲೇ ನೀವು ಗಳಿಕೆ ಶುರು ಮಾಡಬಹುದು.
ಹಳೆಯ, ಮಾಲಿನ್ಯಕಾರಕ ವಾಹನ ಗುಜರಿಗೆ ಹಾಕುವವರಿಗೆ ಭರ್ಜರಿ ಗುಡ್ ನ್ಯೂಸ್
ಈ ಕಾರುಗಳಿಗೆ ಸಾಲ ಪಡೆಯಲು ನೀವು ಬ್ಯಾಂಕ್ ಗಳಿಗೆ ಪದೇ ಪದೇ ಹೋಗಬೇಕಾಗಿಲ್ಲ. ಡೀಲರ್ಸ್ ನೀವಿರುವಲ್ಲಿಯೇ ಈ ಸೌಲಭ್ಯ ನೀಡುತ್ತಾರೆ. ದಾಖಲೆಗಳನ್ನು ನಿಮ್ಮ ಕೈಗೆ ನೀಡುತ್ತಾರೆ. ಡೀಲರ್ಸ್ ಕೇವಲ ಆಧಾರ್ ಕಾರ್ಡ್ ಹಾಗೂ ಚೆಕ್ ಪಡೆದು ಕಾರನ್ನು ನಿಮಗೆ ನೀಡುತ್ತಾರೆ. ಸೆಕೆಂಡ್ ಹ್ಯಾಂಡ್ ಕಮರ್ಷಿಯಲ್ ಕಾರುಗಳಿಗೆ ಶೇಕಡಾ 50ರಷ್ಟು ಡೌನ್ಪೇಮೆಂಟ್ ಮಾಡಿದ್ರೆ ಸಾಕು. ಓಲಾ, ಉಬರ್ ಜೊತೆ ಮಾತ್ರವಲ್ಲ ನೀವು ಸ್ವಂತ ಕಾರನ್ನು ಬಾಡಿಗೆ ಓಡಿಸಬಹುದು. ಕಾರು ದಿನಕ್ಕೆ 12 ಗಂಟೆ ಓಡುತ್ತಿದ್ದರೆ ನಿಮಗೆ 1500 ರೂಪಾಯಿವರೆಗೆ ಲಾಭವಾಗುತ್ತದೆ. ಕಾರ್ ಡೀಲರ್ಸ್ ಹುಡುಕುವಾಗ ಎಚ್ಚರಿಕೆ ವಹಿಸಿ. ಸರಿಯಾದ ಮಾಹಿತಿ ಪಡೆದ ನಂತ್ರ ಕಾರ್ ಖರೀದಿ ಮಾಡಿ.