ಮನೆಯಲ್ಲಿ ಕುಳಿತು ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಬ್ರೆಡ್ ತಯಾರಿಸುವ ಬ್ಯುಸಿನೆಸ್ ಶುರು ಮಾಡಿ. ಮನೆಯಲ್ಲೇ ಬ್ರೆಡ್ ತಯಾರಿಸಿ ಗಳಿಕೆ ಮಾಡಬಹುದು. ಬ್ರೆಡ್ ತಯಾರಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಒಳ್ಳೆ ಗುಣಮಟ್ಟದ ಬ್ರೆಡ್ ತಯಾರಿಸಿ ಬೇಕರಿ ಅಥವಾ ಅಂಗಡಿಗಳಿಗೆ ಪೂರೈಸಬಹುದು.
ಕೊರೊನಾ ವೈರಸ್, ಲಾಕ್ ಡೌನ್ ನಂತ್ರ ಬ್ರೆಡ್ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಈ ವ್ಯಾಪಾರ ಶುರು ಮಾಡಲು 10 ಸಾವಿರ ರೂ. ಹೂಡಿಕೆ ಮಾಡಬೇಕು. ಬ್ರೆಡ್ ತಯಾರಿಸಲು ಗೋಧಿ ಹಿಟ್ಟು ಅಥವಾ ಮೈದಾ, ಉಪ್ಪು, ಸಕ್ಕರೆ, ನೀರು, ಬೇಕಿಂಗ್ ಪೌಡರ್, ಒಣ ಹಣ್ಣು ಮತ್ತು ಹಾಲಿನ ಪುಡಿ ಬೇಕಾಗುತ್ತದೆ. ಇದನ್ನು ತಯಾರಿಸಲು ದೊಡ್ಡ ಜಾಗದ ಅಗತ್ಯವಿಲ್ಲ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು.
ಸದಾ ಬೇಡಿಕೆಯಲ್ಲಿರುವ ಆಹಾರಗಳಲ್ಲಿ ಬ್ರೆಡ್ ಕೂಡ ಒಂದು. ಇದ್ರ ಬೇಡಿಕೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಬ್ರೆಡ್ ತಯಾರಿಸುವ ಬಗ್ಗೆ ತರಬೇತಿ ಪಡೆದು ನೀವು ವ್ಯಾಪಾರ ಶುರು ಮಾಡಬಹುದು. ಗುಣಮಟ್ಟ ಉತ್ತಮವಾಗಿದ್ದರೆ ಹಾಗೂ ಪ್ರಚಾರ ಚೆನ್ನಾಗಿದ್ದಲ್ಲಿ ನಿಮ್ಮ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ. ಗ್ರಾಮೀಣ ಕೈಗಾರಿಕೆಗಳಲ್ಲಿ ಬೇಕರಿ ಉದ್ಯಮವೂ ಮುಖ್ಯವಾಗಿದೆ. ಭವಿಷ್ಯದಲ್ಲಿ ಅದರ ಬೇಡಿಕೆಯು ಅನೇಕ ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.