ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿರುವವರಿಗೆ ವ್ಯಾಪಾರ ಶುರು ಮಾಡಲು ಸಾಕಷ್ಟು ದಾರಿಗಳಿವೆ. ಕೆಲವೊಂದು ವ್ಯಾಪಾರವನ್ನು ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಕೈತುಂಬ ಗಳಿಸಬಹುದು. ಅದ್ರಲ್ಲಿ ಅಲೋವೆರಾ ಕೂಡ ಒಂದು. ಅಲೋವೆರಾ ಬೆಳೆಸುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು. ಅತ್ಯಂತ ಲಾಭದಾಯಕ ವ್ಯವಹಾರಗಳಲ್ಲಿ ಇದು ಒಂದಾಗಿದೆ.
ಗಿಡಮೂಲಿಕೆ ಮತ್ತು ಸೌಂದರ್ಯವರ್ಧಕಗಳಲ್ಲಿ ಇದರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಔಷಧಿ ತಯಾರಿಸುವ ಕಂಪನಿಗಳಿಂದ ಇದಕ್ಕೆ ಹೆಚ್ಚು ಬೇಡಿಕೆಯಿದೆ. ವಾಣಿಜ್ಯ ಬೆಳೆಯಾಗಿ ಇದನ್ನು ಬೆಳೆಸಿದ್ರೆ ವಾರ್ಷಿಕವಾಗಿ 8-10 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು. ಲಾಭಕರ ಬೆಳೆಗಳಲ್ಲಿ ಇದು ಒಂದಾಗಿರುವ ಕಾರಣ ವಿದ್ಯಾವಂತ ಯುವಕರು ಉದ್ಯೋಗ ಬಿಟ್ಟು ಅಲೋವೆರಾ ಬೆಳೆಗೆ ಆಕರ್ಷಿತರಾಗಿದ್ದಾರೆ.
ಅಲೋವೆರಾದ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಬಯಸಿದ್ದರೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಸ್ ಕೆಲವು ತಿಂಗಳುಗಳ ತರಬೇತಿ ನೀಡುತ್ತದೆ. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ತರಬೇತಿ ಪಡೆಯಬಹುದು.
ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಕರ್ನಾಟಕ ಭವನದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಲೋವೆರಾ ಕೃಷಿಗೆ ಬಿಸಿಲ ಹವಾಮಾನ ಅಗತ್ಯ. ಇದನ್ನು ಸಾಮಾನ್ಯವಾಗಿ ಬಿಸಿ ಆರ್ದ್ರ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಮರಳು ಮಣ್ಣು ಉತ್ತಮವಾಗಿದೆ. ಇದಲ್ಲದೆ ಉತ್ತಮ ಕಪ್ಪು ಮಣ್ಣಿನಲ್ಲಿಯೂ ಇದನ್ನು ಬೆಳೆಸಬಹುದು. ಬೆಳೆ ಬೆಳೆಯುವ ಮೊದಲು ಮಣ್ಣು, ಹವಾಮಾನದ ಬಗ್ಗೆ ಮಾಹಿತಿ ಪಡೆದಿರಬೇಕು. ನೀರು ನಿಲ್ಲದ ಪ್ರದೇಶದಲ್ಲಿ ಇದನ್ನು ಬೆಳೆಯಬೇಕು. ಜುಲೈ- ಆಗಸ್ಟ್ ನಲ್ಲಿ ಅಲೋವೆರಾ ಬೆಳೆಯಲು ಸೂಕ್ತ ಸಮಯ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಒಂದು ಹೆಕ್ಟೇರ್‌ನಲ್ಲಿ ಸುಮಾರು 27, 500 ರೂಪಾಯಿ ವೆಚ್ಚದಲ್ಲಿ ಅಲೋವೆರಾ ಬೆಳೆಯಬಹುದು. ಆದರೆ ಮೊದಲ ವರ್ಷದಲ್ಲಿ ಕಾರ್ಮಿಕ, ಗೊಬ್ಬರ ಸೇರಿ ವೆಚ್ಚ 50,000 ರೂಪಾಯಿಯಾಗುತ್ತದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 40 ರಿಂದ 45 ಟನ್ ಅಲೋವೆರಾ ದಪ್ಪ ಎಲೆಗಳನ್ನು ಪಡೆಯಬಹುದು. ಇದನ್ನು ಆಯುರ್ವೇದ ಔಷಧಿಗಳ ತಯಾರಿಸುವ ಕಂಪನಿಗಳಿಗೆ ಮತ್ತು ಸೌಂದರ್ಯವರ್ಧಕ ತಯಾರಕರಿಗೆ ಮಾರಾಟ ಮಾಡಬಹುದು. ದೇಶದ ವಿವಿಧ ಮಂಡಿಗಳಲ್ಲಿ ಪ್ರತಿ ಟನ್‌ಗೆ 15,000 ರಿಂದ 25,000 ರೂಪಾಯಿ ಬೆಲೆ ಇದೆ. ಇದರ ಪ್ರಕಾರ ಸುಲಭವಾಗಿ ವಾರ್ಷಿಕ 8 ರಿಂದ 10 ಲಕ್ಷ ರೂಪಾಯಿಗಳನ್ನು ಗಳಿಸಬಹುದು.