ಮಡಿಕೇರಿ: ಸಾಲ ವಿತರಣೆಯಲ್ಲಿ ಪಡಿತರ ಚೀಟಿ ಮಾನದಂಡ ರದ್ದು ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದ್ದಾರೆ.
ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲ ಪಡೆದುಕೊಳ್ಳಲು ರೈತರಿಗೆ ನಿಗಧಿಪಡಿಸಲಾಗಿದ್ದ ಪಡಿತರ ಚೀಟಿ ಮಾನದಂಡ ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ವರ್ಷ 30 ಲಕ್ಷ ರೈತರಿಗೆ 21 ಡಿಸಿಸಿ ಬ್ಯಾಂಕುಗಳ ಮೂಲಕ 20,810 ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಮಾನದಂಡಗಳಿಂದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಡಿತರ ಚೀಟಿಯ ಮಾನದಂಡವನ್ನು ಮಾಡಲಾಗುವುದು. ಈ ಕುರಿತಾಗಿ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗಿದೆ. ಪಹಣಿ ಪತ್ರ ಇರುವ ಎಲ್ಲರಿಗೂ ಸಾಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದ್ದಾರೆ.