ಮೈಸೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ರೈತರಿಗೆ ನೆರವಾಗಲೆಂದು ಸಹಕಾರ ಇಲಾಖೆಯ ಮೂಲಕ ಶೂನ್ಯ ಬಡ್ಡಿ ದರದಲ್ಲಿ 24,000 ಕೋಟಿ ರೂ. ಹೊಸ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
ಶೂನ್ಯ ಬಡ್ಡಿ ದರ ಸಾಲ ಯೋಜನೆಯ ಮೂಲಕ 33 ಲಕ್ಷ ರೈತರಿಗೆ ಸಾಲ ನೀಡಲಿದ್ದು, 3 ಲಕ್ಷ ಹೊಸ ರೈತರಿಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ಡಿಸಿಸಿ ಬ್ಯಾಂಕುಗಳ ಮೂಲಕ ಸಾಲ ನೀಡುತ್ತಿದ್ದು, ಹಿಂದಿನ ಸಾಲ ಪಡೆದ ರೈತರು ಕೂಡ ಹೊಸ ಸಾಲ ಪಡೆಯಬಹುದು ಎಂದು ಸಚಿವರು ಹೇಳಿದ್ದಾರೆ.