ಭಾರತದ ಪ್ರಮುಖ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಮೇ 2020 ರಲ್ಲಿ ಪ್ರಾರಂಭವಾದ ವಿಶೇಷ ಎಫ್‌ಡಿ ಯೋಜನೆಯನ್ನು ಕೊರೊನಾ ಕಾರಣಕ್ಕೆ ಎರಡು ಬಾರಿ ವಿಸ್ತರಿಸಲಾಗಿತ್ತು.
ಎಸ್‌ಬಿಐ ಹೊರತುಪಡಿಸಿ ಉಳಿದ ಬ್ಯಾಂಕ್ ಗಳ ಯೋಜನೆ ಮಾರ್ಚ್ 31 ರಂದು ಮುಕ್ತಾಯಗೊಳ್ಳಲಿದೆ. ಎಸ್ಬಿಐ ಈ ಯೋಜನೆಯನ್ನು ಜೂನ್ 30, 2021 ರವರೆಗೆ ವಿಸ್ತರಿಸಿದೆ. ಎಚ್‌ಡಿಎಫ್‌ಸಿ ಹಿರಿಯ ನಾಗರಿಕರಿಗಾಗಿ ಎಫ್ ಡಿ ಯೋಜನೆಯ ಠೇವಣಿ ಮೇಲೆ ಶೇಕಡಾ 6.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ದರಗಳು ನವೆಂಬರ್ 13 ರಿಂದ ಜಾರಿಗೆ ಬಂದಿದೆ.
ಇನ್ನು ಐಸಿಐಸಿಐ ಬ್ಯಾಂಕ್, ಹಿರಿಯ ನಾಗರಿಕರಿಗೆ ವಾರ್ಷಿಕ ಶೇಕಡಾ 6.30ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ದರಗಳು ಅಕ್ಟೋಬರ್ 21 ರಿಂದ ಜಾರಿಗೆ ತಂದಿದೆ.
ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಎಫ್ಡಿ ಮೇಲೆ ಶೇಕಡಾ 6.25ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದು ನವೆಂಬರ್ 16 ರಿಂದ ಜಾರಿಗೆ ಬಂದಿದೆ.