ನವದೆಹಲಿ: ಸವರಿನ್ ಗೋಲ್ಡ್ ಬಾಂಡ್ ಯೋಜನೆ 2022-23 ರ ಎರಡನೇ ಸರಣಿ ಆಗಸ್ಟ್ 22 ರಂದು ಆರಂಭವಾಗಲಿದೆ.
ಈ ಚಿನ್ನದ ಬಾಂಡ್ ಗಳ ಅರ್ಜಿಯು ಆಗಸ್ಟ್ 26 ರವರೆಗೆ ಮುಂದುವರಿಯಲಿದೆ. ಶುಕ್ರವಾರ RBI ಯೋಜನೆಯ ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ 5,197 ರೂ. ಎಂದು ಪ್ರಕಟಿಸಿದೆ. ಯೋಜನೆಗೆ ಅರ್ಜಿ ಮತ್ತು ಪಾವತಿಯನ್ನು ಆನ್ ಲೈನ್ ನಲ್ಲಿ ಮಾಡಿದರೆ ಆರ್.ಬಿ.ಐ. ಪ್ರತಿ ಗ್ರಾಂಗೆ 50 ರೂ. ರಿಯಾಯಿತಿ ನೀಡಲಿದೆ.
ಭಾರತ ಸರ್ಕಾರದ ಪರವಾಗಿ ಆರ್.ಬಿ.ಐ. ಈ ಸವರಿನ್ ಚಿನ್ನದ ಬಾಂಡ್ ಗಳನ್ನು ಬಿಡುಗಡೆ ಮಾಡುತ್ತದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂ. ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ