ಮುಂಬೈ: ಹೂಡಿಕೆದಾರರಿಗೆ ಮತ್ತೊಮ್ಮೆ ಅಗ್ಗದ ದರದಲ್ಲಿ ಚಿನ್ನದ ಬಾಂಡ್ ಖರೀದಿಸುವ ಅವಕಾಶ ಸಿಕ್ಕಿದೆ. 2022-23 ರ ಮೊದಲ ಕಂತಿನ ಸರ್ಕಾರಿ ಗೋಲ್ಡ್ ಬಾಂಡ್(SGB) ಯೋಜನೆಯು ಜೂನ್ 20 ರಿಂದ 5 ದಿನಗಳವರೆಗೆ ಖರೀದಿಗೆ ತೆರೆಯುತ್ತದೆ. ಪ್ರತಿ ಗ್ರಾಂಗೆ 5,091 ರೂ. ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.
ಸರ್ಕಾರಿ ಗೋಲ್ಡ್ ಬಾಂಡ್ (SGB) ಯೋಜನೆಯು 2022-23 ರ ಮೊದಲ ಕಂತಿನಲ್ಲಿ ಜೂನ್ 20 ಮತ್ತು 24 ರವರೆಗೆ ಇರಲಿದೆ. ಚಿನ್ನದ ಬಾಂಡ್ ವಿತರಣೆಯ ಬೆಲೆಯನ್ನು ಪ್ರತಿ ಗ್ರಾಂಗೆ 5,091 ರೂ.ಗೆ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಆನ್ ಲೈನ್ ಅಥವಾ ಡಿಜಿಟಲ್ ನಲ್ಲಿ ಚಿನ್ನದ ಬಾಂಡ್ ಗಳಿಗೆ ಅರ್ಜಿ ಸಲ್ಲಿಸುವ ಮತ್ತು ಪಾವತಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂ.ಗಳಷ್ಟು ಕಡಿಮೆ ಇರುತ್ತದೆ. ಅಂತಹ ಹೂಡಿಕೆದಾರರಿಗೆ ಚಿನ್ನದ ಬಾಂಡ್ ಗಳ ವಿತರಣೆಯ ಬೆಲೆ ಪ್ರತಿ ಗ್ರಾಂಗೆ ರೂ 5,041 ಆಗಿದೆ. ಗೋಲ್ಡ್ ಬಾಂಡ್ ಸ್ಕೀಮ್ 2022-23 ರ ಎರಡನೇ ಸರಣಿ ಆಗಸ್ಟ್ 22 ರಿಂದ 26 ರವರೆಗೆ ಲಭ್ಯವಿರುತ್ತದೆ.