ನವದೆಹಲಿ: ಟೋಲ್ ಪ್ಲಾಜಾಗಳಲ್ಲಿ ಶೀಘ್ರವೇ ಹೊಸ ರೂಲ್ಸ್ ಜಾರಿಯಾಗಲಿದ್ದು, 100 ಮೀಟರ್ ಕ್ಯೂ ಇದ್ದರೆ ಟೋಲ್ ಶುಲ್ಕ ಕಟ್ಟಬೇಕಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಹೊಸ ನಿಯಮ ಜಾರಿಗೊಳಿಸಲಿದ್ದು, ಹೆದ್ದಾರಿಗಳ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಕ್ರಮ ಕೈಗೊಂಡಿದೆ. ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ಹಳದಿ ಗೆರೆ ಎಳೆಯಲಾಗುತ್ತದೆ. ಟೋಲ್ ಹಾದು ಹೋಗುವ ವಾಹನಗಳು ಹಳದಿ ಗೆಳೆಯ ಹೊರಗೆ ನಿಂತಿದ್ದರೆ, ಗೆರೆಯಿಂದ ಒಳಗೆ ನಿಂತಿರುವ ವಾಹನಗಳು ಶುಲ್ಕ ಪಾವತಿಸದೆ ಮುಂದೆ ಸಾಗಬಹುದು ಎನ್ನಲಾಗಿದೆ.
ಟೋಲ್ ಗಳಲ್ಲಿ 10 ಸೆಕೆಂಡ್ ಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಇದ್ದಲ್ಲಿ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಲಾಗಿದೆ.