alex Certify ರೈತರಿಗೊಂದು ಖುಷಿ ಸುದ್ದಿ: ಮಾರುಕಟ್ಟೆಗೆ ಬಂತು ಎಲೆಕ್ಟ್ರಿಕ್ ಟ್ರಾಕ್ಟರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೊಂದು ಖುಷಿ ಸುದ್ದಿ: ಮಾರುಕಟ್ಟೆಗೆ ಬಂತು ಎಲೆಕ್ಟ್ರಿಕ್ ಟ್ರಾಕ್ಟರ್‌

ಟ್ರಾಕ್ಟರ್‌ ಉದ್ಯಮದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಸೊನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್‌ ಬಿಡುಗಡೆ ಮಾಡಿದೆ.

’ಟೈಗರ್‌’ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಸೊನಾಲಿಕಾ ಈ ವಾಹನದ ಎಕ್ಸ್ ಶೋರೂಂ ಬೆಲೆಯನ್ನು ಆರು ಲಕ್ಷ ರೂ.ಗಳಿಗೆ ನಿಗದಿ ಮಾಡಿದೆ. ಈ ಟ್ರಾಕ್ಟರ್‌ ಯೂರೋಪ್‌ನಲ್ಲಿ ವಿನ್ಯಾಸಿತವಾಗಿದ್ದು, ಜರ್ಮನ್ ಮೋಟರ್‌ ಹೊಂದಿದೆ ಎಂದು ಸೊನಾಲಿಕಾ ಹೇಳುತ್ತಿದೆ.

25.5 ಕಿಲೋವ್ಯಾಟ್‌ ಬ್ಯಾಟರಿ ಇರುವ ಈ ಟ್ರಾಕ್ಟರ್ ‌‌ಅನ್ನು 15 ವ್ಯಾಟ್‌ಗಳ ಸಾಕೆಟ್‌ನಿಂದ, 10 ಗಂಟೆಗಳ ಅವಧಿಯಲ್ಲಿ, ಪೂರ್ತಿ ಚಾರ್ಚ್ ಮಾಡಬಹುದಾಗಿದೆ. 25 ಕಿಮೀ/ಗಂಟೆ ಗರಿಷ್ಠ ವೇಗದಲ್ಲಿ ಚಲಿಸಬಲ್ಲ ಈ ಟ್ರಾಕ್ಟರ್‌‌ನ ಬ್ಯಾಟರಿ ಎಂಟು ಗಂಟೆಗಳಷ್ಟು ಇದೆ. ತಾವು ಒದಗಿಸುವ ಫಾಸ್ಟ್‌ ಚಾರ್ಜರ್‌ನಿಂದ ಕೇವಲ ನಾಲ್ಕು ಗಂಟೆಗಳಲ್ಲಿ ಬ್ಯಾಟರಿಯನ್ನು ಪೂರ್ತಿ ಚಾರ್ಜ್ ಮಾಡಬಹುದಾಗಿದೆ ಎಂದು ಸೊನಾಲಿಕಾ ತಿಳಿಸಿದೆ.

ಎರಡು ಟನ್‌ಗಳಷ್ಟು ತೂಕವನ್ನು ಈ ಟ್ರಾಕ್ಟರ್‌ ಟ್ರಾಲಿ ಮುಖಾಂತರ ಎಳೆಯಬಲ್ಲದಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿರುವ ಘಟಕದಲ್ಲಿ ಈ ಟ್ರಾಕ್ಟರ್ ‌ಅನ್ನು ಉತ್ಪಾದನೆ ಮಾಡಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...