alex Certify ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿದ್ಯುತ್ ಕಡಿತ ಚಿಂತೆ ಬಿಡಿ, ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿದ್ಯುತ್ ಕಡಿತ ಚಿಂತೆ ಬಿಡಿ, ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ

ಬೆಂಗಳೂರು: ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲು ಮುಂದಾಗಿದೆ. ರೈತರು ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಪೂರ್ಣ ಬೆಳೆಗೆ ನೀರು ಹಾಯಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪದೇ ಪದೇ ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನಿರಂತರವಾಗಿ ಮತ್ತು ಅವಶ್ಯಕತೆ ಇರುವಾಗ ನೀರು ಹಾಯಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸೌರಶಕ್ತಿಯ ಪಂಪ್ ಗಳನ್ನು ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಸೌರಶಕ್ತಿಯ 3 ಹೆಚ್.ಪಿ. ಸೋಲಾರ್ ಪಂಪ್ ಬೆಲೆ 2 ರಿಂದ 2.5 ಲಕ್ಷ ರೂ., 5 ಹೆಚ್.ಪಿ. ಸೋಲಾರ್ ಪಂಪ್ ಬೆಲೆ 3 ರಿಂದ 3.5 ಲಕ್ಷ ರೂಪಾಯಿ ಇದ್ದು, ಇಷ್ಟೊಂದು ಹಣ ಕೊಟ್ಟು ಪಂಪ್ ಖರೀದಿಸುವುದು ರೈತರಿಗೆ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ ರೈತರಿಗೆ ಸೋಲಾರ್ ಪಂಪ್ಸೆಟ್ ಖರೀದಿಗೆ ಶೇಕಡ 50ರಷ್ಟು ಸಬ್ಸಿಡಿಯನ್ನು ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವುದು.

ಸಾಮಾನ್ಯ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಏಕ ರೀತಿಯ ಅನುದಾನ ನೀಡಲಾಗುತ್ತದೆ. ಈಗಾಗಲೇ ಅಳವಡಿಸಿದ ವಿದ್ಯುತ್ ಚಾಲಿತ ಪಂಪ್ ಗಳನ್ನು ತೆಗೆದಿಡಬೇಕು. ಪ್ಯಾನೆಲ್ ಬೋರ್ಡ್, ಮೋಟರ್ ಸಹಿತ ಸೋಲಾರ್ ಪಂಪ್ ಗಳನ್ನು ಜೋಡಿಸಿಕೊಳ್ಳಬಹುದು. ಅಗತ್ಯವಿದ್ದಾಗ ಇವುಗಳನ್ನು ಅಳವಡಿಸಿಕೊಂಡು ಅಗತ್ಯವಿಲ್ಲದಿರುವಾಗ ತೆಗೆದಿಡಬಹುದು.

ಕೃಷಿ ಹೊಂಡಗಳಲ್ಲಿ ಸದಾ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಕೃಷಿ ಹೊಂಡ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನೋಂದಾಯಿತ ಸಂಸ್ಥೆಗಳಲ್ಲಿ ಮಾತ್ರ ಸೋಲಾರ್ ಪಂಪ್ ಸೆಟ್ ಗಳನ್ನು ಖರೀದಿಸಲು ತಿಳಿಸಲಾಗಿದೆ. ತರಕಾರಿ, ಸೊಪ್ಪು, ಹೂವು, ಹಣ್ಣು ಸೇರಿದಂತೆ ಎಲ್ಲಾ ರೀತಿಯ ತೋಟಗಾರಿಕೆ ಬೆಳೆಗಳಿಗೆ ಸೋಲಾರ್ ಪಂಪ್ಸೆಟ್ ಗಳನ್ನು ಬಳಸಬಹುದಾಗಿದ್ದು, ಆಟೋಮೆಟಿಕ್ ವ್ಯವಸ್ಥೆ ಇದ್ದಲ್ಲಿ ರೈತರಿಗೆ ಖರ್ಚು ಕಡಿಮೆ, ಶ್ರಮ ಕೂಡ ಉಳಿತಾಯವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...