ಕೊರೊನಾ ವೈರಸ್, ಲಾಕ್ ಡೌನ್ ನಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕರು ಮನೆಯಲ್ಲಿ ಕೆಲಸ ಮಾಡ್ತಿದ್ದಾರೆ. ಮನೆಯಲ್ಲಿ ಖಾಲಿ ಕುಳಿತಿರುವ ಜನರಿಗೆ ಏನು ಮಾಡ್ಬೇಕೆಂದು ಗೊತ್ತಾಗ್ತಿಲ್ಲ. ಮನೆ ಅಲಂಕಾರಿಕ್ಕೆ ಜನರು ಹೆಚ್ಚು ಒತ್ತು ನೀಡ್ತಿದ್ದಾರೆ. ಆರಾಮದಾಯಕವಾದ ಸೋಫಾ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಸೋಫಾ ಮಾರಾಟ ಹೆಚ್ಚಾಗಿದೆ.
ಮನೆಯ ವಸ್ತುಗಳ ಬಗ್ಗೆ ಜನರು ಆಸಕ್ತಿ ತೋರುತ್ತಿದ್ದಾರೆ. ಕಪಾಟು, ಅಡುಗೆ ಮನೆ ಸೇರಿದಂತೆ ಆರಾಮದಾಯಕ ಸೋಫಾ ಖರೀದಿಗೆ ಮನಸ್ಸು ಮಾಡ್ತಿದ್ದಾರೆ. ಪಿಠೋಪಕರಣಗಳ ಖರೀದಿ ಶೇಕಡಾ 2ರಿಂದ 3 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ವರ್ಕ್ ಫ್ರಂ ಹೋಮ್ ವಸ್ತುಗಳ ಮಾರಾಟ 5ರಿಂದ 10 ಪಟ್ಟು ಹೆಚ್ಚಾಗಿತ್ತು.
ಇದಕ್ಕೆ ಮುಖ್ಯ ಕಾರಣ ಪುರುಷರು ಮನೆಯಲ್ಲಿರುವುದು. ಮನೆಯಲ್ಲಿರುವ ಪುರುಷರು ಆರಾಮದಾಯಕ ವಸ್ತುಗಳ ಮೇಲೆ ಆಸಕ್ತಿ ತೋರಿದ್ದಾರೆ. ಕಳೆದ ವರ್ಷ ಕಂಪ್ಯೂಟರ್ ಟೇಬಲ್ ಹಾಗೂ ಖುರ್ಚಿ ಮಾರಾಟ ಹೆಚ್ಚಾಗಿತ್ತು. ಸೋಫಾ, ಬಿನ್ ಬ್ಯಾಗ್, ಲ್ಯಾಂಪ್, ಕಾರ್ಪೆಟ್ ಸೇರಿದಂತೆ ಮನೆ ಅಲಂಕಾರದ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಈ ವರ್ಷ ಇವುಗಳ ಮಾರಾಟ ಉತ್ತಮವಾಗಿದೆ.