ಈ ಕೊರೋನಾ ಬಂದದ್ದೇ ಬಂದದ್ದು. ಇಡೀ ಜಗತ್ತೇ ಸ್ತಬ್ಧವಾಗಿದೆ. ಸಾಲದ್ದಕ್ಕೀಗ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದೆಲ್ಲ ಸರ್ವೇ ಸಾಮಾನ್ಯವೂ ಆಗಿಬಿಟ್ಟಿದೆ. ಆದರೆ, ಬಹುದಿನಗಳ ಬಳಿಕ ಡಚ್ ಅಲ್ಲಿ ನೈಟ್ ಕ್ಲಬ್ ಮೋಜುಗಾರರನ್ನ ಕೈಬೀಸಿ ಕರೆದಿದೆ.
ಇಲ್ಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಮಾತ್ರ ಅಲ್ಲ ಡಿಸ್ ಡ್ಯಾನ್ಸಿಂಗ್ ಕೂಡ ಉಂಟು. ಅರೇ, ಇದೇನಿದು ಡಿಸ್ ಡ್ಯಾನ್ಸಿಂಗ್ ಎನ್ನುವಿರಾ….? ಮುಂದೆ ಓದಿ.
ಕ್ಲಬ್ ಒಳಗೆ 30 ಜನರಿಗಷ್ಟೇ ಪ್ರವೇಶ. ಕುಡಿತವೂ ಸೇರಿ ತಲಾ 10 ಯುರೋ ಶುಲ್ಕ. ನೈಟ್ ಕ್ಲಬ್ ಒಳಗೆ ಕನಿಷ್ಠ 5 ಅಡಿ ಅಂತರದಲ್ಲಿ ಹಾಕಿರುವ ಕುರ್ಚಿಯಲ್ಲಿ ಕುಳಿತು, ಕುಳಿತಲ್ಲೇ ಸಂಗೀತಕ್ಕೆ ತಕ್ಕಂತೆ ಮೈಕೈ ಕುಣಿಸಿ ರಿಲ್ಯಾಕ್ಸ್ ಮಾಡಬಹುದಷ್ಟೇ. ಅದೂ ಮಧ್ಯಾಹ್ನದ ವೇಳೆಯಲ್ಲೇ ಹೊರತು, ರಾತ್ರಿಯಲ್ಲಲ್ಲ.
ಅಂತರ ಕಾಯ್ದುಕೊಂಡೇ ಕುಣಿಯುವ ಇದನ್ನೇ ಸೋಶಿಯಲ್ ಡಿಸ್ – ಡಾನ್ಸಿಂಗ್ ಎಂದು ವ್ಯಾಖ್ಯಾನಿಸಲಾಗಿದೆ. ಜುಲೈನಿಂದ ಕ್ಲಬ್ ಒಳಗೆ 100 ಜನರಿಗೆ ಪ್ರವೇಶ ಕಲ್ಪಿಸಲು ಚಿಂತನೆ ನಡೆದಿದೆ.