ಕೇವಲ ನೂರು ರೂಪಾಯಿಗೆ ಪೆನ್ ಡ್ರೈವ್, 500 ರೂಪಾಯಿಗೆ ರೇಬಾನ್ ಸನ್ಗ್ಲಾಸ್, 500 ರೂಪಾಯಿಗೆ ಒರಿಜಿನಲ್ ಲೆದರ್ ವಾಲೆಟ್ ಇದೆಲ್ಲ ಸಿಗೋದು ದೆಹಲಿಯ ಜನಪ್ರಿಯ ಪಾಲಿಕಾ ಬಜಾರ್ ನಲ್ಲಿ. ಕಡಿಮೆ ಬೆಲೆಗೆ ಕದ್ದ ಮಾಲುಗಳನ್ನು ನೀಡುವ ಈ ಪಾಲಿಕಾ ಬಜಾರ್ ಸೇರಿದಂತೆ ಇ ಮಾರುಕಟ್ಟೆ ಸ್ನ್ಯಾಪ್ ಡೀಲ್ ಮುಡಿಗೂ ಕಳಂಕ ತಟ್ಟಿದೆ.
ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್, ನಕಲಿ – ಕಳವು ಸರಕುಗಳ ಕುಖ್ಯಾತ ಮಾರುಕಟ್ಟೆ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ ಪಾಲಿಕಾ ಬಜಾರ್, ಮುಂಬೈನ ಹೀರಾ ಪನ್ನಾ, ಕೋಲ್ಕತ್ತಾದ ಕಿಡ್ಡರ್ ಪುರದ ಹೆಸರೂ ಇದೆ.
ಮೊದಲು ಈ ಪಟ್ಟಿಯಲ್ಲಿ ಐಜಾಲ್ ಮಾರುಕಟ್ಟೆ ಹೆಸರಿತ್ತು. ಆದ್ರೀಗ ಪಾಲಿಕಾ ಬಜಾರ್ ಮೊದಲ ಸ್ಥಾನ ಪಡೆದಿದೆ. ವಿಶ್ವದಾದ್ಯಂತ 34 ಮಾರುಕಟ್ಟೆ ಹೆಸರು ಇದ್ರಲ್ಲಿದೆ. ಆನ್ಲೈನ್ ಮಾರುಕಟ್ಟೆಗಳೂ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ನಕಲಿ ಮಾಲು ಮಾರಾಟ ಮಾಡುವ ಆನ್ಲೈನ್ ಮಾರುಕಟ್ಟೆಯಲ್ಲಿ ಸ್ನ್ಯಾಪ್ ಡೀಲ್ ಸೇರಿದಂತೆ 39 ಆನ್ಲೈನ್ ಮಾರುಕಟ್ಟೆಗಳ ಹೆಸರಿದೆ. ಸ್ನ್ಯಾಪ್ ಡೀಲ್ 2018ರಲ್ಲಿಯೇ ನಕಲಿ ವಸ್ತುಗಳನ್ನು ಮಾರಾಟ ಮಾಡ್ತಿದೆ ಎಂಬುದು ಬಹಿರಂಗವಾಗಿತ್ತು.