ನವದೆಹಲಿ: ಡಿಜಿಟಲ್ ಪಾವತಿ ವಿಧಾನಗಳನ್ನು ಪ್ರೋತ್ಸಾಹಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೊಸ ಯೋಜನೆ ರೂಪಿಸಿದೆ. ದೇಶದ ಎಲ್ಲ ಮೊಬೈಲ್ ಗ್ರಾಹಕರಿಗೆ ಉಚಿತವಾಗಿ USSD ಸಂದೇಶಗಳನ್ನು ಒದಗಿಸುವ ಪ್ರಸ್ತಾವನೆ ಮಂಡಿಸಲಾಗಿದೆ.
ಇಂಟರ್ನೆಟ್ ಮತ್ತು ಬ್ಯಾಂಕಿಂಗ್ ಸೌಲಭ್ಯಗಳಿಲ್ಲದ ಫೀಚರ್ ಫೋನ್ ಗಳ ಸಿಮ್ ಸರ್ವಿಸ್ ಗಾಗಿ ಯು.ಎಸ್.ಎಸ್.ಡಿ. ಸಂದೇಶಗಳನ್ನು ಬಳಕೆ ಮಾಡಲಾಗುತ್ತದೆ. ಇಂತಹ ಸಂದೇಶಗಳಿಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಉಚಿತವಾಗಿ ಗ್ರಾಹಕರಿಗೆ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ.
ಆರ್.ಬಿ.ಐ.ನಿಂದ ರಚಿಸಲಾಗಿದ್ದ ಉನ್ನತ ಮಟ್ಟದ ಡಿಜಿಟಲ್ ಪಾವತಿ ಉತ್ತೇಜನ ಸಂಬಂಧಿಸಿದ ಸಮಿತಿ ಈ ಬಗ್ಗೆ ಶಿಫಾರಸು ಮಾಡಿದ್ದು, ಇದರ ಅನ್ವಯ ಟ್ರಾಯ್ ದೇಶದ ಎಲ್ಲ ಮೊಬೈಲ್ ಗ್ರಾಹಕರಿಗೆ ಉಚಿತವಾಗಿ USSD ಸಂದೇಶಗಳನ್ನು ಒದಗಿಸುವ ಪ್ರಸ್ತಾವನೆ ಮಂಡಿಸಿದೆ.