ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಒಡೆತನದ ವಾಟ್ಸಾಪ್ ನಿಂದ ಹೊಸ ಫೀಚರ್ ಪರಿಚಯಿಸಲಾಗುವುದು.
ಅದರಂತೆ ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ವಾಟ್ಸಾಪ್ ಬಳಸಬಹುದಾಗಿದೆ. ಗರಿಷ್ಠ 4 ಸಾಧನಗಳಲ್ಲಿ ಬಳಕೆ ಮಾಡಬಹುದಾದ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಲಿದೆ. ಸ್ಮಾರ್ಟ್ಫೋನ್, ಕಂಪ್ಯೂಟರ್, ಟ್ಯಾಬ್ಲೆಟ್ ಗಳಲ್ಲಿಯೂ ವಾಟ್ಸಾಪ್ ಸಂದೇಶವನ್ನು ರವಾನಿಸುವ ಆಯ್ಕೆಯನ್ನು ನೀಡಲಾಗುವುದು.
whatsapp.web ಮೂಲಕ ಕಂಪ್ಯೂಟರ್ನಲ್ಲಿ ವಾಟ್ಸಾಪ್ ಅನ್ನು ಬಳಕೆ ಮಾಡಬಹುದಾಗಿತ್ತು. ಇದಕ್ಕೆ ಸ್ಮಾರ್ಟ್ಫೋನ್ ಅಗತ್ಯವಾಗಿ ಬೇಕಿತ್ತು. ಫೋನ್ ನಲ್ಲಿ ಬರುವ ಸಂದೇಶ ವೆಬ್ ಮೂಲಕ ಕಂಪ್ಯೂಟರ್ನಲ್ಲಿ ದಾಖಲಾಗುತ್ತಿತ್ತು. ಈಗ ನಾಲ್ಕು ಸಾಧನಗಳಲ್ಲಿ ಬಳಸುವ ವಾಟ್ಸಾಪ್ ಫೀಚರ್ ಪರಿಚಯಿಸಲಾಗುವುದು ಎಂದು ಹೇಳಲಾಗಿದೆ.