ನವದೆಹಲಿ: ಸ್ಮಾರ್ಟ್ ಫೋನ್ ಮತ್ತು ಫೀಚರ್ ಫೋನ್ ಗಳು ದುಬಾರಿಯಾಗಲಿವೆ. ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ, ಟಚ್ ಪ್ಯಾನೆಲ್ ಗಳ ಮೇಲೆ ಕೇಂದ್ರ ಸರ್ಕಾರ ಶೇಕಡ 10ರಷ್ಟು ಆಮದು ಸುಂಕ ಏರಿಕೆ ಮಾಡಿದ ಪರಿಣಾಮ ಫೋನ್ ಗಳ ಬೆಲೆ ಜಾಸ್ತಿ ಆಗಲಿದೆ ಎಂದು ಹೇಳಲಾಗಿದೆ.
ಸ್ಯಾಮ್ಸಂಗ್, ವಿವೋ, ಒಪ್ಪೋ, ರಿಯಲ್ ಮಿ ಮೊದಲಾದ ಸ್ಮಾರ್ಟ್ ಫೋನ್ ಮತ್ತು ಫೀಚರ್ ಫೋನ್ ದರ ಏರಿಕೆ ಆಗಲಿದೆ. ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ದೇಶದಲ್ಲಿಯೇ ಉತ್ಪಾದನೆಗೆ ಒತ್ತು ನೀಡಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಮದು ಸುಂಕ ಏರಿಕೆ ಮಾಡಿದೆ.
ಟಚ್ ಪ್ಯಾನಲ್ ಗಳು ಮತ್ತು ಡಿಸ್ ಪ್ಲೇ ಮೊಬೈಲ್ ಫೋನ್ ಗಳ ಸಂಕೀರ್ಣ ಭಾಗಗಳಾಗಿದ್ದು ಶೇಕಡ 15 ರಿಂದ 25 ರಷ್ಟು ವೆಚ್ಚ ಅದಕ್ಕೆ ತಗುಲುತ್ತದೆ. ಹೆಚ್ಚುವರಿ ಸೆಸ್ ಕೂಡ ಇರುವುದರಿಂದ ಆಮದು ಸುಂಕ ಶೇಕಡ 11 ರಷ್ಟು ಆಗಲಿದ್ದು ಇದರ ಪರಿಣಾಮ ಫೋನ್ ಗಳ ಬೆಲೆ ಶೇಕಡ 3 ರಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.