alex Certify ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಜಿಎಸ್ಟಿಯಿಂದ ವಿನಾಯಿತಿ ಮಸೂದೆ ಅಂಗೀಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಜಿಎಸ್ಟಿಯಿಂದ ವಿನಾಯಿತಿ ಮಸೂದೆ ಅಂಗೀಕಾರ

ಬೆಂಗಳೂರು: ಸಣ್ಣ ವ್ಯಾಪಾರಿಗಳು ರಾಜ್ಯದಲ್ಲಿ ಜಿಎಸ್‌ಟಿ ಪಾವತಿಸಬೇಕಿಲ್ಲ. ವಿಧಾನಸಭೆಯಲ್ಲಿ ಈ ಕುರಿತಾದ ಮಸೂದೆ ಧ್ವನಿ ಮತದ ಮೂಲಕ ಅಂಗೀಕಾರವಾಗಿದೆ.

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಂದಣಿ ವಿನಾಯಿತಿ ಜೊತೆಗೆ ವ್ಯಾಪಾರಿಗಳು ಸುಳ್ಳು ಮಾಹಿತಿ ನೀಡಿದರೆ ಸರ್ಕಾರದ ಬದಲು ಅವರೇ ಹೊಣೆಗಾರರಾಗುವ ಸಂಬಂಧ ಕರ್ನಾಟಕ ಸರಕು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕಕ್ಕೆ ಸದನದಲ್ಲಿ ಧ್ವನಿ ಮತದ ಮೂಲಕ ಅಂಗೀಕಾರ ದೊರೆತಿದೆ.

ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೀಲ್ ಮಸೂದೆಗೆ ಅಂಗೀಕಾರ ಕೋರಿದ್ದು, ಸದಸ್ಯರು ಅನೇಕ ಅಭಿಪ್ರಾಯ ಮತ್ತು ಸಲಹೆ ನೀಡಿದ ನಂತರ ಅಂಗೀಕಾರಗೊಂಡಿದೆ.

ಆರು ವರ್ತಕ ಸ್ನೇಹ ಉಪಕ್ರಮಗಳು ಮತ್ತು 16 ಸುಗಮ ತೆರಿಗೆ ಅನುಸರಣ ಹಾಗೂ ಆಡಳಿತಾತ್ಮಕ ಉಪಕ್ರಮಗಳಿಗೆ ಸಂಬಂಧಿಸಿದಂತೆ ವಿಧೇಯಕದಲ್ಲಿ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್​ಟಿ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ದ್ವಿಗುಣಗೊಂಡಿದೆ.  2017 -2018ರಲ್ಲಿ 44,000 ಕೋಟಿ ರೂಪಾಯಿ ಇದ್ದ ಜಿ.ಎಸ್.ಟಿ. ಸಂಗ್ರಹ 2022 -23 ರಲ್ಲಿ 81,848 ಕೋಟಿ ರೂ.ಗೆ ಹೆಚ್ಚಳವಾಗಿದೆ.

ಸರಕು ಸಾಗಣೆ ವ್ಯವಹಾರದಲ್ಲಿ 40 ಲಕ್ಷ ರೂ. ವರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದು. ಸೇವೆಗಳ ವ್ಯವಹಾರದಲ್ಲಿ 20 ಲಕ್ಷ ರೂಪಾಯಿವರೆಗೆ ನೋಂದಣಿ ರಹಿತ ವ್ಯವಹಾರ ನಡೆಸಬಹುದಾಗಿದೆ. ವ್ಯಾಟ್ಸಾಪ್ ಗೆ ವೇಳೆ ರಾಜ್ಯದಲ್ಲಿ 5.8 ಲಕ್ಷ ವರ್ತಕರು ವ್ಯಾಟ್ ಪಾವತಿಸುತ್ತಿದ್ದರು. ಜಿ.ಎಸ್.ಟಿ. ಅವಧಿಯಲ್ಲಿ 10 ಲಕ್ಷ ವರ್ತಕರು ತೆರಿಗೆ ಪಾವತಿಸುತ್ತಿದ್ದಾರೆ ಎಂದು ಸಚಿವ ಹೆಚ್.ಕೆ. ಪಾಟೀಲ್ ವಿಧೇಯಕದ ಬಗ್ಗೆ ವಿವಿಧ ಮಾಹಿತಿ ನೀಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...