ನವದೆಹಲಿ: ಪೋಸ್ಟ್ ಆಫೀಸ್ ನ ಎಲ್ಲಾ ಶಾಖೆಗಳಲ್ಲಿ ಪಿಪಿಎಫ್, ಮತ್ತು ಎನ್.ಎಸ್.ಸಿ. ಸೇವೆ ಲಭ್ಯವಿರಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳನ್ನು ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದಾಗಿದೆ.
ನಗರ ಪ್ರದೇಶದ ಅಂಚೆ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯಗಳು ಲಭ್ಯವಿದ್ದು ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿಯೂ ಈ ಸೇವೆಗಳು ಲಭ್ಯವಾಗಲಿವೆ. ಗ್ರಾಮೀಣ ಭಾಗದಲ್ಲಿ ಹೂಡಿಕೆದಾರರನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ ಹಳ್ಳಿಗಳಲ್ಲಿನ ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಸೇವಿಂಗ್ ಸ್ಕೀಮ್, ಪಿಪಿಎಫ್, ಎನ್.ಎಸ್.ಸಿ. ಉಳಿತಾಯ ಯೋಜನೆಗಳ ತೆರೆಯಲು ಅವಕಾಶ ನೀಡಲಾಗಿದೆ.
1.31 ಕೋಟಿ ಅಂಚೆ ಕಚೇರಿಗಳು ಗ್ರಾಮಾಂತರ ಪ್ರದೇಶದಲ್ಲಿ ಇದ್ದು ಗ್ರಾಮಾಂತರ ಜನತೆಗೆ ಇದರಿಂದ ಅನುಕೂಲವಾಗಲಿದೆ. ಉಳಿತಾಯ ಖಾತೆ, ಆರ್.ಡಿ., ಎಫ್.ಡಿ., ಸುಕನ್ಯಾ ಸಮೃದ್ಧಿ ಖಾತೆ ಜೊತೆಗೆ ಪಿಪಿಎಫ್, ಮಾಸಿಕ ಆದಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಯೋಜನೆ ಪ್ರಮಾಣಪತ್ರ, ಕಿಸಾನ್ ವಿಕಾಸ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಸೇವೆಯನ್ನು ಗ್ರಾಮಾಂತರ ಪ್ರದೇಶದಲ್ಲಿಯೂ ಒದಗಿಸಲಾಗುವುದು ಎಂದು ಹೇಳಲಾಗಿದೆ.