ನವದೆಹಲಿ: ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಯಥಾಸ್ಥಿತಿಯಲ್ಲಿ ಉಳಿಸಲು ನಿರ್ಧರಿಸಿದೆ. 2021 -22 ರ ಜನವರಿ -ಮಾರ್ಚ್ ಅವಧಿಗೆ ಸಣ್ಣ ಉಳಿತಾಯ ಖಾತೆ ಬಡ್ಡಿ ದರ ಯಥಾಸ್ಥಿತಿಯಲ್ಲಿ ಇರಲಿದೆ
ಸುಕನ್ಯಾ ಸಮೃದ್ಧಿ ಮತ್ತು ಅಂಚೆ ಇಲಾಖೆ ಉಳಿತಾಯ ಯೋಜನೆಗಳು, ಪಿಪಿಎಫ್, ಎನ್.ಎಸ್.ಸಿ. ಯೋಜನೆಗಳ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಹಿರಿಯನಾಗರಿಕರ ಉಳಿತಾಯ ಯೋಜನೆಗೆ ಶೇಕಡ 7.40, ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿದರ ಶೇಕಡ 7.10 ರಷ್ಟು, ಸುಕನ್ಯಾ ಸಮೃದ್ಧಿಗೆ ಶೇ. 7.6 ರಷ್ಟು ಬಡ್ಡಿ ದರ ಇದೆ.