ನವದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಖಾತೆದಾರರಿಗೆ ತುಸು ನೆಮ್ಮದಿಯ ಸುದ್ದಿ ನೀಡಿದೆ. ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ.
2020 ಜುಲೈನಿಂದ ಸೆಪ್ಟೆಂಬರ್ ಅವಧಿಗೆ ಪಿಪಿಎಫ್, ಎನ್.ಎಸ್.ಸಿ. ಯೋಜನೆಗಳ ಬಡ್ಡಿದರಗಳನ್ನು ಶೇಕಡ 7.1 ರ ಸ್ಥಿತಿಯಲ್ಲಿ ಇರಿಸಲಾಗಿದೆ. ಅಂಚೆ ಇಲಾಖೆ ಸುತ್ತೋಲೆ ಪ್ರಕಾರ ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿದರ ಶೇಕಡ 7.40 ರಷ್ಟು ಇದ್ದು ಅದೇ ದರದಲ್ಲಿ ಮುಂದುವರೆಯಲಿದೆ.
ಅವಧಿ ಠೇವಣಿಗಳಿಗೆ ಶೇಕಡ 5.5 ರಷ್ಟು, ಶೇಕಡ 6 ರಷ್ಟು, ಶೇಕಡ 7 ರಷ್ಟು ಬಡ್ಡಿ ದರ ಇರುತ್ತದೆ. 5 ವರ್ಷ ಅವಧಿಯ ರಾಷ್ಟ್ರೀಯ ಉಳಿತಾಯ ಯೋಜನೆ ಶೇಕಡ 6.8 ರಷ್ಟು, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡ 7.6 ರಷ್ಟು ಬಡ್ಡಿ ನೀಡಲಾಗುವುದು. ಕಿಸಾನ್ ವಿಕಾಸ್ ಪತ್ರ ಶೇಕಡ 6.9 ರಷ್ಟು ಬಡ್ಡಿ ನೀಡಲಾಗುವುದು.
ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಒಂದು ವರ್ಷದಿಂದ ಉಳಿತಾಯ ಬಡ್ಡಿ ದರ ಕಡಿತಗೊಳಿಸಿದ ನಂತರದಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿದರ ಇಳಿಕೆ ಮಾಡಲಾಗಿದೆ.ಸಣ್ಣ ಯೋಜನೆಗಳ ಬಡ್ಡಿ ದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗಿವುದು. ಪ್ರಸ್ತುತ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ.