
ನವದೆಹಲಿ: ರಷ್ಯಾ -ಉಕ್ರೇನ್ ಯುದ್ಧದ ನಂತರ ಏರಿಳಿತ ಕಾಣುತ್ತಿರುವ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. ಬುಧವಾರ 10 ಗ್ರಾಂ ಚಿನ್ನದ ದರ 1202 ರೂಪಾಯಿ ಹೆಚ್ಚಾಗಿದ್ದು, 51,889 ರೂಪಾಯಿಗೆ ತಲುಪಿದೆ. ಅದೇ ರೀತಿ ಬೆಳ್ಳಿ ದರ ಕೂಡ 2148 ರೂಪಾಯಿ ಹೆಚ್ಚಾಗಿದ್ದು, 67 956 ರೂಪಾಯಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ ಎಂದು ಹೇಳಲಾಗಿದೆ.