ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಚಿನ್ನದ ದರ 526 ರೂ., ಬೆಳ್ಳಿ ದರ ಕೆಜಿಗೆ 1231 ರೂ. ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆಗೆ ಅನುಗುಣವಾಗಿ ರಾಷ್ಟ್ರರಾಜಧಾನಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 526 ರೂಪಾಯಿ ಏರಿಕೆ ಆಗುವುದರೊಂದಿಗೆ 45,784 ರೂ.ನಿಂದ 46,310 ರೂಪಾಯಿಗೆ ತಲುಪಿದೆ.
ಬೆಳ್ಳಿಯ ದರ ಒಂದು ಕೆಜಿಗೆ 1231 ರೂಪಾಯಿಗೆ ಏರಿಕೆಯಾಗಿದ್ದು, 67,423 ರೂ.ನಿಂದ 68,654 ರೂಪಾಯಿಗೆ ತಲುಪಿದೆ.