ನವದೆಹಲಿ: ಕಳೆದ ಮೂರು ವಾರಗಳಲ್ಲಿ ಚಿನ್ನದ ದರ 4000 ರೂ.ನಷ್ಟು ಕಡಿಮೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 49,090 ರೂಪಾಯಿಗೆ ಇಳಿಕೆಯಾಗಿದೆ. ಆಭರಣ ಚಿನ್ನದ ದರ 10 ಗ್ರಾಂಗೆ 45 ಸಾವಿರ ರೂಪಾಯಿ ಇದೆ. ಕಳೆದ ಮೂರು ವಾರದಲ್ಲಿ ಚಿನ್ನದ ದರ 10 ಗ್ರಾಂಗೆ 4 ಸಾವಿರ ರೂ. ನಷ್ಟು ಹಾಗೂ ಬೆಳ್ಳಿ ದರ ಪ್ರತಿ ಕೆಜಿಗೆ 6000 ರೂ.ನಷ್ಟು ಕಡಿಮೆಯಾಗಿದೆ.
ಜಾಗತಿಕ ಬೆಳವಣಿಗಳನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಳಿತವಾಗುತ್ತದೆ. ಕೊರೋನಾ ಲಸಿಕೆ ಅಭಿವೃದ್ಧಿ, ಅಮೆರಿಕದಲ್ಲಿ ರಾಜಕೀಯ ಅಸ್ಥಿರತೆ ತಿಳಿಯಾಗಿರುವುದು ಮೊದಲಾದ ಬೆಳವಣಿಗೆಗಳು ಹಾಗೂ ಚಿನ್ನದ ಮೇಲಿನ ಹೂಡಿಕೆ, ಬೇಡಿಕೆ ಕಡಿಮೆಯಾಗಿರುವುದರಿಂದ ಗೋಲ್ಡ್ ರೇಟ್ ಇಳಿಕೆ ಹಾದಿಯಲ್ಲಿದೆ ಎನ್ನಲಾಗಿದೆ.