ಕೋವಿಡ್ ಸಾಂಕ್ರಾಮಿಕದಿಂದ ಭಾರತ ತತ್ತರಿಸುತ್ತಿದೆ. ಇದೇ ವೇಳೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಸಲಹೆ ನೀಡಿದಾಗಿನಿಂದ ಭಾರತ ಮತ್ತು ಅಮೆರಿಕಾ ನಡುವೆ ಸಂಚರಿಸುವ ವಿಮಾನಗಳಲ್ಲಿನ ಪ್ರಯಾಣ ದರಗಳು ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತ-ಯುಎಸ್ ವಿಮಾನದಲ್ಲಿ ಎಕಾನಮಿ ಕ್ಲಾಸ್ ಟಿಕೆಟ್‌ನ ಸರಾಸರಿ ಶುಲ್ಕ ಸರಿಸುಮಾರು ಐವತ್ತು ಸಾವಿರ ರೂ. ಇರುತ್ತದೆ ಆದರೆ ಈ ವಾರದಲ್ಲಿ ಪ್ರಯಾಣ ದರ ಸುಮಾರು 1.5 ಲಕ್ಷ ರೂ. ಆಗಿದೆ.
ಹೆಣ್ಮಕ್ಳೆ ಸ್ಟ್ರಾಂಗು ಗುರು……ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕ
ಭಾರತದಲ್ಲಿ ನಿರ್ಬಂಧ ಹೆಚ್ಚಾದರೆ ಕಷ್ಟದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಅನೇಕ ಪ್ರಯಾಣಿಕರು ಯುಸ್‌ನತ್ತ ಮುಖ ಮಾಡಿದ್ದಾರೆ. ಇದರಿಂದ ವಿಮಾನ ಪ್ರಯಾಣದ ಟಿಕೆಟ್‌ಗೆ ಬಲು ಬೇಡಿಕೆ ಬಂದಿದೆ.
ಕೋವಿಡ್ ವ್ಯಾಪಕವಾಗಿರುವ ಕಾರಣ ಜರ್ಮನಿ, ಯುಕೆ ಮತ್ತು ಯುಎಇ ಸೇರಿ ಕೆಲವು ದೇಶಗಳು ಭಾರತದಿಂದ ವಿಮಾನ ಪ್ರಯಾಣವನ್ನು ನಿರ್ಬಂಧಿಸಿವೆ. ಯುಎಇ ಭಾನುವಾರದಿಂದ ಭಾರತದಿಂದ 10 ದಿನಗಳವರೆಗೆ ಪ್ರಯಾಣವನ್ನು ನಿಷೇಧಿಸಿದೆ. ಈ ನಡುವೆ ದೇಶದೊಳಗಿನ ಖಾಸಗಿ ಚಾರ್ಟರ್ಡ್ ವಿಮಾನಗಳಿಗೆ ಹೆಚ್ಚಿನ ಬೇಡಿಕೆಯಿದೆ.