ಕೊರೊನಾ ವೈರಸ್ ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಆಗಾಗ ಹ್ಯಾಂಡ್ ಸ್ಯಾನಿಟೈಜರ್ ಮೂಲಕ ಕೈ ತೊಳೆಯುವಂತೆ ಸಲಹೆ ನೀಡಲಾಗ್ತಿದೆ. ಆದ್ರೆ ಇನ್ಮುಂದೆ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಬೆಲೆ ದುಬಾರಿಯಾಗಲಿದೆ.
ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳು ಶೇಕಡಾ 18 ರಷ್ಟು ಸರಕು ಮತ್ತು ಸೇವಾ ತೆರಿಗೆಗೆ ಒಳಪಟ್ಟಿರುತ್ತದೆ ಎಂದು ಎಎಆರ್ ನಿರ್ಧರಿಸಿದೆ. ಈ ಬಗ್ಗೆ ಗೋವಾ ಪೀಠದಲ್ಲಿ ನಡೆದ ವಾದ – ವಿವಾದದ ನಂತ್ರ ಈ ತೀರ್ಪು ಹೊರ ಬಿದ್ದಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಅತ್ಯಗತ್ಯ ವಸ್ತುವಾಗಿ ವರ್ಗೀಕರಿಸಿದೆ. ಆದ್ರೆ ಜಿಎಸ್ಟಿ ಕಾಯ್ದೆಯಲ್ಲಿ ವಿನಾಯಿತಿ ಪಡೆದ ವಸ್ತುಗಳ ಪ್ರತ್ಯೇಕ ಪಟ್ಟಿ ಇದೆ ಎಂದಿದೆ.
ಹ್ಯಾಂಡ್ ಸ್ಯಾನಿಟೈಜರ್ ನಲ್ಲಿ ಆಲ್ಕೋಹಾಲ್ ಇದ್ದಲ್ಲಿ ಅದಕ್ಕೆ ಶೇಕಡಾ 18ರಷ್ಟು ಜಿಎಸ್ಟಿ ವಿಧಿಸಬೇಕಾಗುತ್ತದೆ. ಸ್ಯಾನಿಟೈಜರ್ ವರ್ಗೀಕರಣದ ಬಗ್ಗೆ ಸಾಕಷ್ಟು ವಾದ-ವಿವಾದ ನಡೆಯುತ್ತಿದೆ. ಇದಕ್ಕೆ ಕೊರೊನಾ ಸಮಯದಲ್ಲಿ ಬೇಡಿಕೆ ಹೆಚ್ಚಾಗಿದೆ. ಅನೇಕ ಕಂಪನಿಗಳು ಸ್ಯಾನಿಟೈಜರ್ ತಯಾರಿಸುತ್ತಿವೆ. ಹಾಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡುವ ಅಗತ್ಯವಿದೆ.