ಇತ್ತೀಚೆಗಷ್ಟೇ ಮುಕ್ತಾಯವಾದ ಉತ್ತರ ಪ್ರದೇಶ, ಗೋವಾ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಸ್ಫರ್ಧಿಸಿದ್ದ ಶಿವಸೇನಾ, ಅಲ್ಲಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತೋರುತ್ತಿವೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿರುವ ಶಿವಸೇನಾ, ಮೇಲ್ಕಂಡ ರಾಜ್ಯಗಳಲ್ಲಿ ಸ್ಫರ್ಧಿಸಿ ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಅನುಭವಿಸಿದೆ.
ಮುಖ್ಯಮಂತ್ರಿಗೆ ಸೋಲಿನ ರುಚಿ ತೋರಿಸಿದ್ದು ಮೊಬೈಲ್ ರಿಪೇರಿ ಅಂಗಡಿ ಮಾಲೀಕ…! ಇಲ್ಲಿದೆ ಆಪ್ ಅಭ್ಯರ್ಥಿ ಕುರಿತ ಇಂಟ್ರಸ್ಟಿಂಗ್ ಮಾಹಿತಿ
ಗೋವಾದಲ್ಲಿ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಶಿವಸೇನಾ, ಆ ಎಲ್ಲಾ ಕ್ಷೇತ್ರದಲ್ಲೂ ಠೇವಣಿ ಕಳೆದುಕೊಂಡಿದೆ. ರಾಜ್ಯದ ಕಾರ್ಟಾಲಿಂ (55 ಮತಗಳು), ಕ್ವೆಪೆಮ್ (66), ವಾಸ್ಕೋ ಡ ಗಾಮಾ (71) ಹಾಗೂ ಸಂಕೇಲಿಂ (99) ಕ್ಷೇತ್ರಗಳಲ್ಲಿ 100 ಮತಗಳನ್ನು ಪಡೆಯಲು ಸಹ ಶಿವಸೇನೆ ವಿಫಲವಾಗಿದೆ.
ಹೈದರಾಬಾದ್ ಮನೆಗೆ ನುಗ್ಗಿದ ಕಳ್ಳನ ಸುಳಿವನ್ನು ಅಮೆರಿಕದಿಂದಲೇ ಪೊಲೀಸರಿಗೆ ಮುಟ್ಟಿಸಿದ ಮಾಲೀಕ…!
ಗೋವಾದಲ್ಲಿ ಚಲಾವಣೆಯಾದ ಮತಗಳ ಪೈಕಿ ನೋಟಾದ ಪಾಲು 1.12% ಇದ್ದರೆ ಶಿವಸೇನಾ ಪಡೆದ ಮತಗಳ ಪಾಲು 0.18% ಇದೆ.
ಮಣಿಪುರದ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಶಿವಸೇನಾ 0.34% ಮತಗಳನ್ನು ಪಡೆದರೆ, ನೋಟಾದ ಮತಗಳೇ 0.54% ಇದ್ದವು.
ಇನ್ನು ಉತ್ತರ ಪ್ರದೇಶದಲ್ಲಿ ಶಿವಸೇನಾಗೆ 0.03% ಮತಗಳು ಸಂದಾಯವಾದರೆ, ನೋಟಾ ಪರವಾಗಿ 0.69%ದಷ್ಟು ಮತದಾರರು ವಾಲಿದ್ದಾರೆ.