
ಶಿವಮೊಗ್ಗ: ಬರದಿಂದ ಕಂಗಾಲಾಗಿರುವ ರೈತರಿಗೆ ಶಿಮುಲ್ ಹಾಲು ಒಕ್ಕೂಟ ಶಾಕ್ ನೀಡಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ(ಶಿಮುಲ್)ನಿಂದ ಹಾಲಿನ ಖರೀದಿ ದರದಲ್ಲಿ ದಿಢೀರ್ ಎರಡು ರೂಪಾಯಿ ಕಡಿತ ಆದೇಶ ಜಾರಿಗೆ ಬಂದಿದೆ.
ಬರಗಾಲದ ಸಂದರ್ಭದಲ್ಲಿ ಹಾಲು ಖರೀದಿ ದರ ಇಳಿಕೆ ಮಾಡಿರುವುದು ಹಾಲು ಉತ್ಪಾದಕರಿಗೆ ಹೊರೆಯಾಗಿ ಪರಿಣಮಿಸಿದೆ. ಹಾಲಿನ ಉತ್ಪಾದನೆಗೂ ಮಾರಾಟಕ್ಕೂ ತಾಳೆಯಾಗದೆ ಒಕ್ಕೂಟ ನಷ್ಟದ ಹಾದಿಗೆ ಹೊರಳಿದೆ. ಹೀಗಾಗಿ ರೈತರಿಗೆ ನೀಡುವ ಹಾಲಿನ ದರವನ್ನು ಲೀಟರ್ ಗೆ ಎರಡು ರೂಪಾಯಿ ಇಳಿಕೆ ಮಾಡಲಾಗಿದೆ. ಡಿಸೆಂಬರ್ 21 ರಿಂದ ಈ ಆದೇಶ ಜಾರಿಗೆ ಬಂದಿದೆ ಎಂದು ಹೇಳಲಾಗಿದೆ.