ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ಉಳಿತಾಯದ ಹಣದಲ್ಲಿ ಜೀವನ ನಡೆಸುವ ಹಿರಿಯ ನಾಗರಿಕರಿಗೆ ದೊಡ್ಡ ಅನುಕೂಲ ಕಲ್ಪಿಸಲಾಗಿದೆ.
ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿ ತೊಡಗಿಸಬಹುದಾದ ಠೇವಣಿಯನ್ನು 15 ಲಕ್ಷ ರೂ. ನಿಂದ 30 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಉಳಿತಾಯ ಯೋಜನೆಯಲ್ಲಿ ಠೇವಣಿ ಇರಿಸಿದರೆ ಅತ್ಯಂತ ಗರಿಷ್ಠ ಬಡ್ಡಿ ನೀಡಲಾಗುತ್ತದೆ. ಪ್ರಸ್ತುತ ಶೇಕಡ 8 ರಷ್ಟು ಬಡ್ಡಿ ನೀಡಲಾಗುತ್ತಿದೆ.
ಬೇರೆ ಆದಾಯ ಮೂಲಗಳಿಲ್ಲದ ಹಿರಿಯ ನಾಗರಿಕರು ಈ ಠೇವಣಿಯ ಬಡ್ಡಿ ಹಣದಲ್ಲಿ ಜೀವನ ನಡೆಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಸರ್ಕಾರ ಈ ಯೋಜನೆ ತಂದಿದ್ದು, ಇದುವರೆಗೆ ಅಂಚೆ ಕಚೇರಿಯ ಹಿರಿಯ ನಾಗರೀಕರ ಉಳಿತಾಯ ಯೋಜನೆಯಡಿ 15 ಲಕ್ಷ ರೂ.ವರೆಗೆ ಹಣ ತೊಡಗಿಸಬಹುದಾಗಿತ್ತು. ಇದನ್ನು 30 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಯೋಜನೆ ಅಡಿ ಲಭಿಸುವ ಬಡ್ಡಿಗೆ ವಾರ್ಷಿಕ 50,000 ರೂ.ವರೆಗೆ ತೆರಿಗೆ ವಿನಾಯಿತಿ ಇದೆ.