alex Certify ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಸುದ್ದಿ: ಏ.1 ರಿಂದ ಜಾರಿಗೆ ಬರಲಿದೆ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಮಹತ್ವದ ಸುದ್ದಿ: ಏ.1 ರಿಂದ ಜಾರಿಗೆ ಬರಲಿದೆ ಈ ನಿಯಮ

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಮಹತ್ವದ ಸುದ್ದಿಯೊಂದಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ, ಮ್ಯೂಚುವಲ್ ಫಂಡ್ ಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ಹೂಡಿಕೆದಾರರಿಗೆ ಈ ನಿಯಮ ಅನ್ವಯವಾಗಲಿದೆ.

ಸೆಬಿ, ಮ್ಯೂಚುಯಲ್ ಫಂಡ್‌ ನ Debt ಮೇಲೆ ಹೂಡಿಕೆಯ ಮಿತಿಯನ್ನು ಸೀಮಿತಗೊಳಿಸಿದೆ. ಇನ್ಮುಂದೆ ಮಿತಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲವೆಂದು ಸೆಬಿ ಹೇಳಿದೆ. ಸೆಬಿ ಪ್ರಕಾರ ಎಯುಎಂನ ಶೇಕಡಾ 10ರಷ್ಟನ್ನು ಮಾತ್ರ Debt ಮೇಲೆ ಹೂಡಿಕೆ ಮಾಡಬಹುದು. ಇದ್ರಲ್ಲಿ ಹೆಚ್ಚುವರಿ ಶ್ರೇಣಿ 1 ಮತ್ತು ಹೆಚ್ಚುವರಿ ಶ್ರೇಣಿ 2 ಸೇರಿದೆ.

ಈಗಾಗಲೇ ಜಾರಿಯಲ್ಲಿರುವ, ಈ ಮಿತಿಯನ್ನು ಮೀರಿದ ಹೂಡಿಕೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಹೊಸ ಹೂಡಿಕೆಗೆ ಮಾತ್ರ ಹೊಸ ನಿಯಮ ಅನ್ವಯವಾಗುತ್ತದೆ. ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಸೆಬಿ ಸ್ಪಷ್ಟಪಡಿಸಿದೆ. ಹೂಡಿಕೆದಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಆಯ್ಕೆಯಿರುತ್ತದೆ. ಇಕ್ವಿಟಿ, ಬಂಗಾರ, ಡೆಬ್ಟ್ ಹೀಗೆ ಬೇರೆ ಬೇರೆ ಆಯ್ಕೆಯಲ್ಲಿ ಹೂಡಿಕೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...