
ನವದೆಹಲಿ: ಮ್ಯೂಚುವಲ್ ಫಂಡ್‌ಗಳು, ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿಗಳನ್ನು ಸೇರಿಸಲು ಜೂನ್ 2024 ರವರೆಗೆ ಸೆಬಿ ಗಡುವು ವಿಸ್ತರಿಸಿದೆ.
ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಡಿಮ್ಯಾಟ್ ಮತ್ತು ಮ್ಯೂಚುವಲ್ ಫಂಡ್ ಖಾತೆದಾರರಿಗೆ ನಾಮನಿರ್ದೇಶನವನ್ನು ನೀಡಲು ಗಡುವನ್ನು ಜೂನ್ 30, 2024 ರವರೆಗೆ ವಿಸ್ತರಿಸಿದೆ. ಈ ಹಿಂದೆ, ಫಲಾನುಭವಿಯನ್ನು ನಾಮನಿರ್ದೇಶನ ಮಾಡಲು ಅಥವಾ ಘೋಷಣೆಯ ನಮೂನೆಯನ್ನು ಸಲ್ಲಿಸುವ ಮೂಲಕ ಆಯ್ಕೆಯಿಂದ ಹೊರಗುಳಿಯಲು ಡಿಸೆಂಬರ್ 31, 2023(ಭಾನುವಾರ) ಗಡುವು ನೀಡಲಾಗಿತ್ತು.
ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳ ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.